ಮಡಿಕೇರಿ ಜೂ.10 : ಇಂಡಿಯನ್ ಮಿಲಿಟರಿ ಆಕಾಡೆಮಿಯ 152ನೇ ಕೊರ್ಸಿನ ನಿರ್ಗಮನ ಪಥ ಸಂಚಲನದಲ್ಲಿ ಕೊಡಗಿನ ಮಾರ್ಚಂಡ ಶಯನ್ ಸೊಮಣ್ಣ 9ನೇ ಗ್ರೆನೇಡಿಯರ್ ರೆಜಿಮೆಂಟ್ ಗೆ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.
ಶಯನ್ ಸೋಮಣ್ಣ ನಾಪೋಕ್ಲುವಿನ ಮರಂದೋಡ ಗ್ರಾಮದ ಮಾರ್ಚಂಡ ವಿಜಯ್ ನಂಜಪ್ಪ ಮತ್ತು ಮಾರ್ಚಂಡ ಚಿತ್ರ (ತವರು ಮನೆ ಮಲ್ಲಾಜಿರ) ದಂಪತಿಗಳ ಪುತ್ರ.
ಇವರು ಪ್ರಾಥಮಿಕ ಶಿಕ್ಷಣವನ್ನು ನಾಪೋಕ್ಲು ಸೆಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ಹಾಗೂ ಜವಾಹರ್ ನವೋದಯ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಕೂಡಿಗೆ ಸೈನಿಕ ಶಾಲೆಯಲ್ಲಿ ವ್ಯಾಸಂಗ ಮಾಡಿ ಶಾಲಾ ನಾಯಕನಾಗಿ ನಂತರ ನ್ಯಾಷನಲ್ ಡಿಪೆನ್ಸ್ ಅಕಾಡೆಮಿಯ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಮೂರು ವರ್ಷ ಓಆಂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ, ಜವಾಹರ್ ನೆಹರು ಯೂನಿವರ್ಸಿಟಿ ದೆಹಲಿಯ ಬಿಎಸ್ಸಿ (ಸಿಎಸ್)ಪದವಿ ಪಡೆದರು.
ನ್ಯಾಷನಲ್ ಡಿಪೆನ್ಸ್ ಅಕಾಡೆಮಿ (NDA) ಯಲ್ಲಿ ಬೆಟಾಲಿಯನ್ ಕ್ಯಾಪ್ಟನ್ ಹಾಗೂ ಅಕಾಡೆಮಿಕ್ ಕ್ಯಾಪ್ಟನ್ ಆಗಿ ಕಾರ್ಯನಿರ್ವಾಹಿಸಿ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಒಂದು ವರ್ಷ ತರಬೇತಿ ಪಡೆದಿದ್ದಾರೆ.
ಶಯನ್ ಸೋಮಣ್ಣ ಗೆ ಅಕಾಡೆಮಿಯ ಉತ್ತಮ ಹಾಕಿ ಆಟಗಾರ ಮತ್ತು ವಾಲಿಬಾಲ್ ಆಟಗಾರ ಪ್ರಶಸ್ತಿ, ಮಿಸ್ಟರ್ (IMA) ಇಂಡಿಯನ್ ಮಿಲಿಟರಿ ಅಕಾಡೆಮಿಯ ಎರಡು ರನ್ನರ್ ಅಪ್ ಪ್ರಶಸ್ತಿ ಲಭಿಸಿದೆ.
ಇಂದು (ಜೂ.10) ರಂದು ಉತ್ತರಕಾಂಡ್ ನ ಡೆರಡೋನ್ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ 152ನೇ ಕೊರ್ಸಿನ ನಿರ್ಗಮನ ಪಥ ಸಂಚಲನ ನಡೆಯಿತು.
ವರದಿ : ಅಶ್ರಫ್








