ಸೋಮವಾರಪೇಟೆ ಜೂ.10 : ಚನ್ನಾಪುರದಲ್ಲಿ ಗ್ರಾಮದೇವತೆಯ ವಿಶೇಷ ಪೂಜೆ ಶ್ರದ್ಧಾಭಕ್ತಿ ನಡೆಯಿತು.
ಸಕಾಲದಲ್ಲಿ ಉತ್ತಮ ಮಳೆಗೆ ಹಾಗೂ ಗ್ರಾಮದ ಸಮೃದ್ಧಿಗಾಗಿ ಗ್ರಾಮಸ್ಥರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ ಅನ್ನದಾನ ನೆರವೇರಿತು.
ಈ ಸಂದರ್ಭ ಮಾತನಾಡಿದ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎನ್.ಅಶ್ವಥ್ ಚನ್ನಾಪುರ, ಪ್ರಕೃತಿಯನ್ನು ಗ್ರಾಮದೇವತೆಯ ಹೆಸರಿನಲ್ಲಿ ಪೂಜೆ ಮಾಡುವುದು ತಲೆತಲಾಂತರದಿಂದ ನಡೆದು ಬಂದಿರುವ ಧಾರ್ಮಿಕ ಆಚರಣೆಯಾಗಿದೆ ಎಂದು ಹೇಳಿದರು.
ಪ್ರಕೃತಿಯೇ ರೈತರನ್ನು ಕಾಪಾಡುತ್ತಿದೆ. ಎಷ್ಟೇ ಮಳೆ ಸುರಿದು ಫಸಲು ಹಾನಿಯಾದರೂ, ಕುಟುಂಬ ನಿರ್ವಹಣೆಗಾಗುವಷ್ಟು ಫಸಲು ರೈತರಿಗೆ ಸಿಗುತ್ತದೆ. ಅದು ಗ್ರಾಮದೇವತೆಯ ಆಶೀರ್ವಾದ ಎಂದೇ ನಂಬಲಾಗಿದೆ ಎಂದು ಹೇಳಿದರು.
ಗ್ರಾಮದಲ್ಲಿ ಯಾವುದೇ ತೊಂದರೆಗಳ ಸಂಭವಿಸಿದರೂ ಗ್ರಾಮ ದೇವತೆಯನ್ನೇ ನೆನೆಯುತ್ತೇವೆ. ಶುಭ ಕಾರ್ಯಗಳು ನಡೆದಾಗಲೂ ಪ್ರಕೃತಿ ಮಾತೆಯನ್ನು ನಮಿಸುವುದು ವಾಡಿಕೆಯಾಗಿದೆ ಎಂದರು.
ಸಮಿತಿ ಕಾರ್ಯದರ್ಶಿ ಸಿ.ಎಸ್.ವೀರೇಶ್, ಪದಾಧಿಕಾರಿಗಳಾದ ಸಿ.ಎನ್.ಅಶೋಕ್, ಪ್ರದೀಪ್‍ಗಾಂಧಿ, ಸಿ.ಎಸ್.ಉಮೇಶ್, ನಂದೀಶ್, ದೀಪಕ್ ಹಾಜರಿದ್ದರು.










