ವಿರಾಜಪೇಟೆ ಜೂ.12 : ನಗರೋತ್ಥಾನ ಯೋಜನೆಯ ವಿಶೇಷ ಅನುದಾನದಲ್ಲಿ ನಗರದ ವಿವಿಧೆಡೆ ನಿರ್ಮಾಣಗೊಂಡಿರುವ ಕಾಂಕ್ರಿಟ್ ರಸ್ತೆಯನ್ನು ಶಾಸಕರು ಲೋಕಾರ್ಪಣೆ ಮಾಡಿದರು.
ನಗರೋತ್ಥಾನ ಅನುದಾನದಲ್ಲಿ ಸುಮಾರು 3 ಕೋಟಿ 69 ಲಕ್ಷ ರೂ. ಅನುದಾನದಲ್ಲಿ ವಿರಾಜಪೇಟೆ ನಗರದ ಡಿಸಿಲ್ವ ನಗರ, ವಿದ್ಯಾನಗರ ಮತ್ತು ಸುಭಾಷ್ ನಗರದಲ್ಲಿ ನಿರ್ಮಿಸಲಾಗಿರುವ ಕಾಂಕ್ರಿಟ್ ರಸ್ತೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ರಾಜ್ಯ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಪೊನ್ನಣ್ಣ ವಿರಾಜಪೇಟೆ ನಗರವು ದಿನದಿಂದ ದಿನಕ್ಕೆ ಅಭಿವೃದ್ಧಿಹೊಂದುತ್ತಿದೆ. ನಗರದಲ್ಲಿ ರಸ್ತೆ, ಕುಡಿಯುವ ನೀರು, ಬೀದಿದೀಪ ಹೀಗೆ ಹಲವು ಸಮಸ್ಯೆಗಳಿದ್ದು, ಅವುಗಳ ನಿವಾರಣೆಗೆ ಶ್ರಮಿಸಲಾಗುವುದು. ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಸಹಕಾರ ಅಗತ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜರನ್ನು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದು, ಎಲ್ಲಾ ಸೌಕರ್ಯಗಳನ್ನು ಜನರಿಗೆ ಒದಗಿಸುವುದು ಸರ್ಕಾರದ ಕೆಲಸ. ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಶಾಸಕರೋಂದಿಗೆ ಸಮಾಲೋಚನೆ ನಡೆಸಿ ಅನುದಾನಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಪುರಸಭೆಯ ಸದಸ್ಯರಾದ ಮೋಹಮ್ಮದ್ ರಾಫಿ, ಪ್ರಸ್ತುತ ಭಾಗದ ಜನತೆಯು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರಿಗೆ ವಿವರಿಸಿದರು.
ಪುರಸಭೆಯ ಅಭಿಯಂತರ ಹೇಮಕುಮಾರ್, ಗುತ್ತಿಗೆದಾರ ನಾಮೇರ ಬಿ. ನವೀನ್, ನಿಶಾಂಕ್, ಪುರಸಭೆಯ ಮುಖ್ಯಾಧಿಕಾರಿ ಚಂದ್ರಕುಮಾರ್, ಪುರಸಭೆ ಅಧ್ಯಕ್ಷರಾದ ಸುಶ್ಮಿತ, ಸದಸ್ಯರಾದ ಹೆಚ್.ಎಸ್ ಮತೀನ್, ಜೂನಾ ಸುನೀತಾ, ದೇಚಮ್ಮ ಕಾಳಪ್ಪ, ಪಟ್ಟಡ ರಂಜಿ ಪೂಣಚ್ಚ, ಸಿಬ್ಬಂದಿಗಳು ಮತ್ತು ಡಿಸಿಲ್ವ ನಗರ, ಸುಭಾಷ್ ನಗರ ಹಾಗೂ ವಿzದ್ಯಾ ನಗರದ ನಾಗರಿಕರು ಹಾಜರಿದ್ದರು.
ವರದಿ : ಕಿಶೊರ್ ಕುಮಾರ್ ಶೆಟ್ಟಿ