ಮಡಿಕೇರಿ ಜೂ.12 : ಕರಿಕೆ ವ್ಯಾಪ್ತಿಯ ಪಚ್ಚೆಪಿಲಾವ್ ಅಂಗನವಾಡಿ ಕೇಂದ್ರದ ಮೇಲೆ ರಬ್ಬರ್ ಮರದ ಕೊಂಬೆ ಬಿದ್ದು ಭಾಗಶಹ ಹಾನಿಯಾಗಿದ್ದು, ¨ಭಾರಿ ಅನಾಹುತ ತಪ್ಪಿದೆ.
ಗಾಳಿ ಮಳೆಯಿಂದಾಗಿ ಸುಮಾರು ಆರು ಸೀಟುಗಳು ತುಂಡಾಗಿ ಬಿದ್ದಿದೆ.
ಸ್ಥಳಕ್ಕೆ ಗ್ರಾ.ಪಂ ಸದಸ್ಯ ಕೆ.ಎ.ನಾರಾಯಣ, ಗ್ರಾಮಸ್ಥರಾದ ಎ.ಎಸ್.ಶಿವನ್ ಮತ್ತು ಅಂಗನವಾಡಿ ಕಾರ್ಯಕರ್ತೆ ಉಷಾಲತಾ, ಸಹಾಯಕಿ ರೇಖಾ ಭೇಟಿ ನೀಡಿ ಮರಗಳ ಕೊಂಬೆಗಳನ್ನು ತೆರವುಗೊಳಿಸಲಾಗಿದೆ.
ಮಳೆಗೆ ಮುಂಚಿತವಾಗಿ ಅಧಿಕಾರಿಗಳು ಕರಿಕೆ ಗ್ರಾಮದ ಎಲ್ಲಾ ಅಂಗನವಾಡಿಗಳಿಗೆ ಭೇಟಿ ನೀಡಿ ಕುಂದುಕೊರತೆಗಳ ಪರಿಶೀಲನೆ ನಡೆಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.









