ಮಡಿಕೇರಿ ಜೂ.12 : ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಮಂಡ್ಯ ಜಿಲ್ಲೆಗೆ ಪದೋನ್ನತಿ ಹೊಂದಿ ವರ್ಗಾವಣೆಯಾದ ಪಾರ್ಮಸಿ ಅಧಿಕಾರಿ ಎಂ.ಟಿ.ಪ್ರಸನ್ನ ಕುಮಾರಿ ಅವರನ್ನು ಆರೋಗ್ಯ ಕೇಂದ್ರದ ವತಿಯಿಂದ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಉತ್ತಪ್ಪ ಭರತ್, ಕೇಂದ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ವರ್ಗಾವಣೆಯಾದ ಪ್ರಸನ್ನ ಕುಮಾರಿ ಅವರ ಕಾರ್ಯ ವೈಖರಿಯನ್ನು ಶ್ಲಾಘೀಸಿ, ಮುಂದಿನ ಭವಿಷ್ಯ ಉಜ್ವಲವಾಗಲೆಂದು ಶುಭಹಾರೈಸಿದರು.
ಪ್ರಯೋಗಾಲಯದ ತಂತ್ರಜ್ಞರಾದ ಲೀಲಾವತಿ ಮಾತನಾಡಿ, 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಕಿರಿಯ ಪ್ರಾಯದಲ್ಲಿಯೇ ಪದೋನ್ನತಿ ಹೊಂದಿ ವರ್ಗಾವಣೆಯಾಗುತ್ತಿರುವುದು ಸಂಸ ಎಂದರಲ್ಲದೇ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಆರೋಗ್ಯ ಕೇಂದ್ರದ ಕನಕಾವತಿ, ಮಂಜುಳಾ, ಸಿಎಚ್‍ಒ ಭವ್ಯ, ಆಶಾ ಕಾರ್ಯಕರ್ತೆ ಜಮುನಾ ಮಾತನಾಡಿ, ಶುಭ ಹಾರೈಸಿದರು.
ಈ ಸಂದರ್ಭ ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ಸುರಕ್ಷಣಾಧಿಕಾರಿ ಹೇಮಾವತಿ, ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ವರದಿ : ಅಶ್ರಫ್