ಮಡಿಕೇರಿ ಜೂ.13 : ಸೋಮವಾರಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷರು ಮತು ಉಪಾಧ್ಯಕ್ಷರನ್ನು ನಿಗಧಿ ಪಡಿಸುವ ಸಭೆಯು ಪಟ್ಟಣದ ಜಾನಕಿ ಕನ್ವೆನ್ಷನ್ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮೀಸಲಾತಿ ನಿಗಧಿ ಪ್ರಕ್ರಿಯೆ ನಡೆಸಲಾಗಿದ್ದು, ನೂತನ ಮೀಸಲಾತಿಯಂತೆ ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರವರ್ಗ-ಬಿ ಮಹಿಳೆ), ಬ್ಯಾಡಗೊಟ್ಟ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್‍ಟಿ ಮಹಿಳೆ), ಬೆಸ್ಸೂರು ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಹಂಡ್ಲಿ ಅಧ್ಯಕ್ಷ (ಪ್ರವರ್ಗ-ಎ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಶನಿವಾರಸಂತೆ ಅಧ್ಯಕ್ಷ(ಪ್ರವರ್ಗ-ಬಿ ಮಹಿಳೆ), ಉಪಾಧ್ಯಕ್ಷ (ಪ್ರವರ್ಗ-ಎ), ದುಂಡಳ್ಳಿ ಅಧ್ಯಕ್ಷ(ಎಸ್‍ಸಿ), ಉಪಾಧ್ಯಕ್ಷ (ಪ್ರವರ್ಗ-ಎ ಮಹಿಳೆ), ನಿಡ್ತ ಅಧ್ಯಕ್ಷ(ಪ್ರವರ್ಗ-ಎ), ಉಪಾಧ್ಯಕ್ಷ (ಎಸ್‍ಸಿ ಮಹಿಳೆ), ಆಲೂರು ಸಿದ್ದಾಪುರ ಅಧ್ಯಕ್ಷ(ಪ್ರವರ್ಗ-ಎ ಮಹಿಳೆ), ಉಪಾಧ್ಯಕ್ಷ(ಎಸ್‍ಸಿ), ಗೌಡಳ್ಳಿ ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ದೊಡ್ಡಮಳ್ತೆ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಶಾಂತಳ್ಳಿ (ಪ್ರವರ್ಗ-ಎ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ತೋಳೂರು ಶೆಟ್ಟಳ್ಳಿ ಅಧ್ಯಕ್ಷ(ಪ್ರವರ್ಗ-ಎ ಮಹಿಳೆ), ಉಪಾಧ್ಯಕ್ಷ (ಎಸ್‍ಸಿ ಮಹಿಳೆ), ಬೆಟ್ಟದಳ್ಳಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಪ್ರವರ್ಗ-ಎ ಮಹಿಳೆ), ಹಾನಗಲ್ಲು ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪ್ರವರ್ಗ-ಎ ಮಹಿಳೆ), ಚೌಡ್ಲು ಅಧ್ಯಕ್ಷ(ಎಸ್‍ಸಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಬೆಳೂರು ಅಧ್ಯಕ್ಷ(ಎಸ್‍ಸಿ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಕಿರಗಂದೂರು ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ಐಗೂರು ಅಧ್ಯಕ್ಷ (ಪ್ರವರ್ಗ-ಎ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ನೆರುಗಳಲೆ ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಗಣಗೂರು ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಹರದೂರು ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಪ್ರವರ್ಗ-ಎ), ಮಾದಪುರ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ(ಪ್ರವರ್ಗ-ಎ) ಹಾಗೂ ಗರ್ವಾಲೆ ಅಧ್ಯಕ್ಷ (ಎಸ್‍ಟಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ) ಮೀಸಲಾತಿ ನಿಗದಿ ಪಡಿಸಲಾಯಿತು.
ಈ ಸಂದರ್ಭ ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ, ತಹಶೀಲ್ದಾರ್ ಎಸ್.ಎನ್.ನರಗುಂದ, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾ.ಪಂ ಸದಸ್ಯರು ಹಾಜರಿದ್ದರು.







