ಮಡಿಕೇರಿ ಜೂ.13 : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಅಂತರ್ ಜಿಲ್ಲಾ ಆರೋಪಿಯನ್ನು ಮಾಲು ಸಹಿತ ಬಂಧಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಪ್ಯ ಗ್ರಾಮದ ನಿವಾಸಿ ಸಿ.ಎಚ್ ಸೈಯದ್ ಬಂಧಿತ ಆರೋಪಿ. ನಾಪೋಕ್ಲು ಮೂರ್ನಾಡು ಮುಖ್ಯ ರಸ್ತೆಯಿಂದ ಹೊದವಾಡ ಗ್ರಾಮಕ್ಕೆ ತೆರಳುವ ಕೂಡು ರಸ್ತೆಯಲ್ಲಿರುವ ಬಸ್ ತಂಗುದಾಣದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಪೊಲೀಸರು ಕಾರ್ಯಾಚರಣೆ ನಡೆಸಿ, 270 ಗ್ರಾಂ. ಗಾಂಜಾ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತು ಹೆಚ್ಚುವರಿ ಪೊಲೀಸ್ ಉಪ ಅಧೀಕ್ಷಕ ಸುಂದರ್ ರಾಜ್ ನಿರ್ದೇಶನದಂತೆ ಡಿವೈಎಸ್‍ಪಿ ಜಗದೀಶ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಸಿಬ್ಬಂದಿಗಳಾದ ಸಾಜನ್, ಲವಕುಮಾರ್, ಪಂಚಲಿಂಗಪ್ಪ ಸತ್ತಿಗೇರಿ, ಶರತ್ ಕುಮಾರ್, ಪ್ರಸನ್ನ, ಗಿರೀಶ್ ಚಾಲಕ ಷರೀಫ್ ಪಾಲ್ಗೊಂಡಿದ್ದರು.









