ಸೋಮವಾರಪೇಟೆ ಜೂ.14 : ತುಮಕೂರು ಟಿಆರ್‍ಎಸ್ ಅಬಾಕಸ್ ಅಕಾಡೆಮಿ ವತಿಯಿಂದ ಅಂತರಾಷ್ಟ್ರೀಯ ಮಟ್ಟದ ಆನ್ ಲೈನ್ ಅಬಾಕಸ್ ಸ್ಪರ್ಧೆಯಲ್ಲಿ ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಸ್ಪರ್ಧೆಯಲ್ಲಿ 35 ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರಣಮ್ಯಾ, ಅದ್ವಿತ್ ಪೂಜಾರಿ, ಪ್ರಧಾನ್ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹಿತೈಷಿ ಟೋಪರ್ ಹಾಗೂ ಎನ್. ಖುಷಿ, ಬಿ.ಎಸ್. ಹಿತೇಶ್ ವಿನ್ನರ್ ಹಾಗೂ ರಚನಾ, ವೇದಾಂತ್, ಡಿಂಪಲ್ ರನ್ನರ್ ಸ್ಥಾನ ಪಡೆದುಕೊಂಡಿದ್ದು, ಉಳಿದವರು ಸಮಾಧಾನಕರ ಬಹುಮಾನ ಪಡೆಯಲು ಯಶಸ್ವಿಯಾದರು.
ಸಾಂದೀಪನಿ ಶಾಲೆಯ ಮುಖ್ಯೋಪಾಧ್ಯಾಯ ರಜಿತ್ ಹಾಗೂ ಅಬಾಕಸ್ ಶಿಕ್ಷಕಿ ಸುಕನ್ಯಾ ಹಾಜರಿದ್ದರು.








