ವಿರಾಜಪೇಟೆ ಜೂ.14 : ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ
ಸಾಂಸ್ಕೃತಿಕ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರುನಾಡ ನಿಧಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜೂ.17 ರಂದು ನಡೆಯಲಿದೆ ಎಂದು ನಾಟ್ಯ ಮಯೂರಿ ನೃತ್ಯ ಶಾಲೆಯ ಸಂಸ್ಥಾಪಕಿ ಪ್ರೇಮಾಂಜಲಿ ಆಚಾರ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಮದ್ಯಾಹ್ನ 2.30 ಗಂಟೆಗೆ ನಗರದ ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮವನ್ನು ಖ್ಯಾತ ಗಾಯಕ, ಚಲನಚಿತ್ರ ನಟ ಶಶಿಧರ್ ಕೋಟೆ ಉದ್ಘಾಟಿಸಲಿದ್ದಾರೆ.
ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ರಂಗಭೂಮಿ ಕಲಾವಿದರು, ಕಾಂತಾರ ಚಲನಚಿತ್ರ ನಟರಾದ ಬಾಸುಮ ಕೊಡಗು ಹಾಗೂ ಸತೀಶ್ ಆಚಾರಿ ಭಾಗವಹಿಸಲಿದ್ದಾರೆ.
ರಂಗಭೂಮಿ ಕಲಾವಿದ, ಪತ್ರಕರ್ತ, ನಟ ಕೆಂಚನೂರು ಶಂಕರ್ ಸಭೆಯ ಅಧ್ಯಕ್ಷತೆ, ಧರ್ಮದರ್ಶಿಗಳಾದ ಡಾ. ಅಶೋಕ್ ಶೆಟ್ಟಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಇದೇ ಸಂದರ್ಭ ಗಾಯಕ ಶಶಿಧರ್ ಕೋಟೆ ಸೇರಿದಂತೆ ಬಾಸುಮ ಕೊಡಗು, ಸತೀಶ್ ಆಚಾರಿ, ಡಾ. ಅಶೋಕ್ ಶೆಟ್ಟಿ, ಮಹೋನಿ ಶೋಭಾ, ಡಾ. ಜ್ಯೋತಿ ಶ್ರೀನಿವಾಸ್, ದಿನಕರ್ ಶೆಟ್ಟಿ, ಸುನೀಲ್ ಮಂಜುನಾಥ್ ರೇವಂಕರ್, ಮಾದಂಡ ತಿಮ್ಮಯ್ಯ, ಪೂಜಾ ರವೀಂದ್ರ, ಶೋಭಾ, ಗಣಪತಿ ಹೋಬಳಿದಾರ್, ಲಕ್ಷ್ಮಣ್ ಸಿ, ಜ್ಞಾನ ರೈ, ಪೋಯಂಗಡ ಅಯ್ಯಪ್ಪ, ರವಿಚಂದ್ರನ್, ಮಹಿಮಾ ಕುಂದಾಪುರ, ಸತೀಶ್ ಕಲ್ಯಾಣಪುರ ಅವರಿಗೆ ಕರುನಾಡ ನಿಧಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಅನಿಲ್ ಕುಮಾರ್, ಸಾಹಿತಿಗಳಾದ ರಜಿತ ಕಾರ್ಯಪ್ಪ ಹಾಗೂ ಪುಷ್ಪಲತಾ ಶಿವಪ್ಪ, ಶಿಕ್ಷಕ ಲವಿನ್ ಲೋಪೇಸ್, ಶಿಕ್ಷಕ ವಿ.ಸಿ.ದೀಪಕ್, ಧರ್ಮದರ್ಶಿ ಬಾಬಾ ಶಂಕರ್, ನೃತ್ಯ ಕಲಾವಿದೆಯರಾದ ಎನ್ ನೌಶಿದ, ಕೆ.ಪಿ.ಶ್ರಾವ್ಯ, ಬಿ.ಬಿ. ಸಾನಿದ್ಯ, ಸುರಕ್ಷ ವೈಲಾಯ, ಕೆ.ಪಿ.ನವ್ಯ, ಟಿ.ವಿ.ವೈಷ್ಣವಿ, ಸಂಗೀತಗಾರರಾದ ಶ್ರೀನಿವಾಸ್ ಸನ್ಮಾನಕ್ಕೆ ಭಾಜನರಾಗಿದ್ದಾರೆ ಎಂದುಮಾಹಿತಿ ನೀಡಿದರು.
ಈ ಸಂದರ್ಭ ನೃತ್ಯ ಶಾಲೆಯ ಟ್ರಸ್ಟಿಗಳಾದ ಬಾಬಾ ಶಂಕರ್, ತಾತಂಡ ನಯನ, ಲವಿನ್ ಲೋಪೇಸ್, ದೀಪಕ್ ಹಾಜರಿದ್ದರು.
Breaking News
- *ಬಾಳುಗೋಡುವಿನಲ್ಲಿ ಸಂಭ್ರಮದ ಕೊಡವ ನಮ್ಮೆ : ಕೊಡವ ಸಂಸ್ಕೃತಿ, ಪರಂಪರೆಗಳ ಉಳಿವಿಗೆ ಶ್ರಮಿಸಿ : ಶಾಸಕ ಎ.ಎಸ್.ಪೊನ್ನಣ್ಣ*
- *ವಿರಾಜಪೇಟೆಯಲ್ಲಿ ಶಾಸಕರಿಂದ ಕೃಷಿ ಯಂತ್ರೋಪಕರಣ ವಿತರಣೆ*
- *ಮಡಿಕೇರಿ : ನ್ಯುಮೋನಿಯಾ ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಅಭಿಯಾನ*
- *ಕೊಡಗು : ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮ ಪ್ರಗತಿ ಸಾಧಿಸಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ*
- *ಕೊಡಗು : ಶಿಶು ಮರಣ ತಡೆಯಲು ಹೆಚ್ಚಿನ ಜಾಗೃತಿ ಮೂಡಿಸಿ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚನೆ*
- *ಮಡಿಕೇರಿಯ ಹೃದಯ ಭಾಗದಲ್ಲಿ ವಾಣಿಜ್ಯ ಸಂಕೀರ್ಣ ಮಾರಾಟಕ್ಕಿದೆ*
- *ನ.30 ರಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕೊಡಗು ಜಿಲ್ಲಾ ಪ್ರವಾಸ*
- *ಜಾರ್ಖಂಡ್ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕಾರ*
- *ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು*
- *TO LET / ಬಾಡಿಗೆಗೆ*