ಸೋಮವಾರಪೇಟೆ. ತಾಲ್ಲೂಕಿನ ಗಡಿಭಾಗದ ಬಾಣಾವರ ಗ್ರಾಮದಲ್ಲಿನ ಮೀಸಲು ಅರಣ್ಯಕ್ಕೆ ಒಳಪಡುವ ಕಲ್ಲು ಕೋರೆ ಕೆರೆಯೊಂದರಲ್ಲಿ ಅಪರಿಚಿತ ಶವ ಒಂದು ಮಂಗಳವಾರ ರಾತ್ರಿ ಪತ್ತೆಯಾಗಿದೆ.
ಸುಮಾರು 45 ವರ್ಷದ ವಯಸ್ಸಿನವನಾಗಿದ್ದು. ಮೃತನ ಸುಳಿವು ಪತ್ತೆಯಾಗಿಲ್ಲ. ಸ್ಥಳಕ್ಕೆ ಪಿಎಸ್‌ಐ ರಮೇಶ್ ಭೇಟಿ ನೀಡಿ ಮಾಹಿತಿ ಪಡೆದರು. ಶವವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಕ್ಷಿಪ್ರ ಕಾರ್ಯಪಡೆ ಸಂಯೋಜಕ ರಾಮದಾಸ್, ಸ್ವಯಂ ಸೇವಕರಾದ ಆನಂದ, ಶೇಖರ್, ಶಶಿ, ರಾಜ, ನಾಗರಾಜ್, ಗಣೇಶ್ ಹಾಗೂ ಶ್ರೀನಿವಾಸ್ ರಾತ್ರಿಯೇ ಕೆರೆಯಲ್ಲಿ ಶವವನ್ನು ಹುಡುಕಿ ಮೇಲಕ್ಕೆ ತಂದರು.
ಈ ಸಂಬಂಧ ಸೋಮವಾರಪೇಟೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










