*ನಮ್ಮ ಡಾಕ್ಟರ್ ನಮ್ಮ ಹೆಮ್ಮೆ, ನಮ್ಮ ಜಿಲ್ಲಾಸ್ಪತ್ರೆ ನಮ್ಮ ಜಿಲ್ಲೆಯ ಹೆಮ್ಮೆ ಅಂತ ಸುತ್ತಲ ಹತ್ತೂರಿನ ಎದುರು ಹೆಮ್ಮೆಯಿಂದ ಎದೆತಟ್ಟಿ ಹೇಳಿಕೊಳ್ಳಬಲ್ಲೆ. ಸಾಕಷ್ಟು ಜನರಲ್ಲಿ ಸರ್ಕಾರಿ ವೈದ್ಯರ ಮೇಲೆ ಒಂದಷ್ಟು ಕೀಳರಿಮೆಗಳಿವೆ. ಇವರೇನೂ ಪುಕ್ಸಟೆ ನೋಡಿಕೊಳ್ತಾರಾ ಸರ್ಕಾರದಿಂದ ಲಕ್ಷಲಕ್ಷ ಸಂಬಳ ತಗೋಳೋದಿಲ್ವಾ ಅಂತ …? ನಿಜ ಇವರಿಗೆ ತಿಂಗಳಿಗೆ ಲಕ್ಷ ಲಕ್ಷ ಸಂಬಳಗಳಿರಬಹುದು ! ಆದರೂ ಒಂದು ಸಲ ಯೋಚನೆ ಮಾಡಿ ಲಕ್ಷ ಲಕ್ಷ ಸಂಬಳ ಪಡೆಯುವ ವೈದ್ಯ ಒಂದೇ ಒಂದುನಿಮಿಷ ಅಲಸ್ಯ ತೋರಿಸಿದರೆ ನಮ್ಮಲ್ಲಿರುವ ಎಷ್ಟು ಹಣದಿಂದ ನಮ್ಮನ್ನು ಉಳಿಸಿಕೊಳ್ಳಲು ಸಾಧ್ಯವಿದೆ ವೈದ್ಯರ ಹೊರತಾಗಿ . ವೈದ್ಯರನ್ನು ನಂಬಿದ್ರೆ ಹರೋ ಹರ ಎನ್ನುವವರ ನಡುವೆ ನಮ್ಮೂರಿನ ವೈದ್ಯರಿಗೆ ವೈದ್ಯೋ ನಾರಾಯಣ ಹರಿ ಅಂತ ಚೀರಿ ಹೇಳಬೇಕು ಅನ್ನಿಸಿತು. ಕೋವಿಡ್ ಆರಂಭದ ದಿನಗಳಿಂದ ಜಿಲ್ಲಾಸ್ಪತ್ರೆಯ ಲೋಪಗಳನ್ನು ಎಷ್ಟು ತೀಕ್ಷ್ಣವಾಗಿ ಖಂಡಿಸಿದ್ದೇನೋ ಹಾಗೆಯೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಡಾಕ್ಟರ್ ಗಳು ನೀಡುತ್ತಿರುವ ಅತ್ಯಮೂಲ್ಯ ಸೇವೆಯ ಬಗ್ಗೆಯೂ ಬರೆಯಬೇಕು ಅನ್ನಿಸ್ತು . ಹೆರಿಗೆಯ ದಿನ ಹತ್ತಿರದಲ್ಲಿದ್ದ ಕಾರಣಕ್ಕೆ ಜೂನ್ 6ನೇಯ ತಾರೀಖಿನಂದೂ ನನ್ನ ಪತ್ನಿಯನ್ನು ಜಿಲ್ಲಾಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸಿದೆ . ಅಡ್ಮಿಟ್ ಮಾಡಿಸಿದ ದಿನದಿಂದಲೂ ನನ್ನ ಮಡದಿಯನ್ನು ಸ್ವಂತ ಸಹೋದರಿಗಿಂತಲೂ ಹೆಚ್ಚಾಗಿ ಆರೈಕೆಯಿಂದ ನೋಡಿಕೊಳ್ಳುತ್ತಿದ್ದ ಸೌಮ್ಯ ಡಾಕ್ಟರ್ ಎಷ್ಟು ಗಂಟೆ ರಾತ್ರೆಯಾದರು ಸರಿ ಅವಶ್ಯಕತೆ ಬಿದ್ರೆ ಕರೆಮಾಡಿ ಅಂತ ಮೊದಲಿನಿಂದಲೂ ಹೇಳಿಕೊಂಡು ಬಂದದ್ದರ ಪರಿಣಾಮ , ನನ್ನ ಮಡದಿಯ ಹೆರಿಗೆ ಆರೈಕೆಗೆ ಊರಿಗೆ ಕಳುಹಿಸಲು ಮನಸ್ಸಾಗದೇ ಮಡಿಕೇರಿಯಲ್ಲಿಯೇ ಉಳಿಸಿಕೊಂಡಿದ್ದೆ. ಕೊಡಗಿನವರಿಗಿಂತ ನೆರೆಯ ಹುಣಸೂರು ಪಿರಿಯಾಪಟ್ಟಣವಷ್ಟೇ ಅಲ್ಲ ಮೈಸೂರು ಮಂಡ್ಯ ಹೀಗೆ ದೂರದೂರಿನ ಸಾಕಷ್ಟು ರೋಗಿಗಳು ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿಯೋ, ಹೆರಿಗೆಗಾಗಿಯೋ ಬರುವುದನ್ನು ಗಮನಿಸಲಾರಂಭಿಸಿದೆ. ಮೊದಮೊದಲು ಎರಡು ಮೂರುಜನ ತುಂಬು ಗರ್ಭಿಣಿಯರನ್ನು ಒಂದೇ ಬೆಡ್ಡಿನಲ್ಲಿ ಮಲಗಿಸುವಾಗ ತುಸು ಇರಿಸುಮುನಿಸಾದರೂ ವಾಸ್ತವ ಅರಿವಾದಾಗ ಸಹಿಸಿಕೊಳ್ಳಲೇಬೇಕು ಅಂತ ಅನ್ನಿಸ್ತು. ಹೆರಿಗೆಗಾಗಿ ಸಾಕಷ್ಟು ಜನ ಮಡಿಕೇರಿಗೆ ಬರುವಾಗ ಎಲ್ಲರಿಗೂ ಸಮಾನವಾಗಿ ಚಿಕಿತ್ಸೆ ಒದಗಿಸುವುದು ಸುಲಭದ ಮಾತು ಆಗಿರಲಿಲ್ಲ. ಹೆರಿಗೆ ಆಸ್ಪತ್ರೆಯ ಮಹಿಳಾ ಭದ್ರತಾ ಸಿಬ್ಬಂದಿಗಳ ಏರುಧ್ವನಿಯ ಬಗ್ಗೆ ಒಂದಷ್ಟು ರೋಗಿಯ ಕಡೆಯವರು ಕಿರಿಕಿರಿ ಮಾಡುತ್ತಿರುವುದು ಗಮನಿಸುತ್ತಲೇ ಬಂದಿದ್ದೇನೆ . ಆಸ್ಪತ್ರೆಯ ಭದ್ರತಾ ಸಿಬ್ಬಂದಿಗಳ ಬಗ್ಗೆ ಅಸಮಾಧಾನ ತೋರುವವರು ಕನಿಷ್ಟ ಅರ್ಧದಿನವಾದ್ರೂ ಆಸ್ಪತ್ರೆಯಲ್ಲಿದ್ದಿದ್ರೆ ಖಂಡಿತವಾಗಿಯೂ ಅವರ ಪರಿಸ್ಥಿತಿ ಸಹಜವಾಗಿ ಅರಿವಾಗಿಬಿಡ್ತಾ ಇತ್ತೇನೋ…. ಅದೆಷ್ಟೂ ಬಾರಿ ಪಾರ್ಕಿಂಗ್ ವಾಹನಗಳ ಬಗ್ಗೆ ತಿಳಿಹೇಳಿದ್ರು ಕೇಳದ ಜನ… ವಾರ್ಡುಗಳಿಗೆ ನಿಗದಿತ ಸಮಯದ ಹೊರತಾಗಿಯೋ/ ಅನವಶ್ಯಕ ಹೋಗಬಾರದು ಎನ್ನುವ ಸಲಹೆ ನೀಡಿದ್ರೂ ನಾನು ಅವನು, ನಾನು ಇವನ ಕಡೆ ಅಂತ, ಸೆಕ್ಯೂರಿಟಿಯವರೊಡನೆ ಧರ್ಪತೋರುವ ಜನರನ್ನು ಕಂಡಾಗ ಗುಬ್ಬಿಯ ಮೇಲೂ ಬ್ರಹ್ಮಾಸ್ತ್ರ ಬಳಸುತ್ತಾರಲ್ಲ ಎನ್ನುವ ಒಂದು ಸಣ್ಣ ಬೇಸರವೂ ಮತ್ತೊಂದುಕಡೆ. ಹೆರಿಗೆ ವಾರ್ಡಿಗೆ/ಮಕ್ಕಳ ವಾರ್ಡಿಗೆ ಬರುವ ಪ್ರತಿರೋಗಿಗಳು ಕೂಡ ತಮ್ಮ ನೆಚ್ಚಿನ ವೈದ್ಯರನ್ನೂ ಅವರ ನಿಗದಿತ ದಿನದಂದೇ ಭೇಟಿಯಾಗಲು ಬರ್ತಾ ಇದ್ದದ್ದು ಮಡಿಕೇರಿಯ ವೈದ್ಯಕೀಯ ಸೇವೆಯ ಬಗ್ಗೆ ಶ್ಲಾಘಿಸಲೇ ಬೇಕು ಅನ್ನಿಸ್ತು. ಒಂದಷ್ಟು ಜನರ ಹೆಸರನಂತೂ ಬರೆಯಲೇಬೇಕು ಅನ್ನಿಸ್ತು . ಕೊಡಗಿನ ಉದ್ದಗಲ ಜನರಲ್ಲಿ ಮನೆಮಾತಾಗಿರುವ ಡಾಕ್ಟರ್ ಮತ್ತು ನರ್ಸ್ ಗಳು ನಮ್ಮ ಕೊಡಗಿನ ಜಿಲ್ಲಾಸ್ಪತ್ರೆಯಲ್ಲಿರೋದು ನಿಜಕ್ಕೂ ಹೆಮ್ಮೆಯಲ್ಲದೇ ಮತ್ತೇನೂ… ದಿನಗಟ್ಟಲೆ ಕಾದು ಇವರನ್ನೇ ಹುಡುಕಿ ಜನರು ಕಾಯುತ್ತಾ ಕೂರ್ತಾರೆ ಅಂದ್ರೆ ಇವರ ಕಾರ್ಯವೈಖರಿ ನಿಜಕ್ಕೂ ಮೆಚ್ಚಬೇಕಾದದ್ದೇ ಅಲ್ವಾ . ಸೌಮ್ಯ ಡಾಕ್ಟರ್, ಮಮತಾ ಡಾಕ್ಟರ್, ಹರ್ಷ ಡಾಕ್ಟರ್, ಸೋಮಶೇಖರ್ ಡಾಕ್ಟರ್, ಲಿಖಿತಾ ಡಾಕ್ಟರ್, ಪೀಜಿ ಡಾಕ್ಟರ್ ಗಳಾದ ಸೌಮ್ಯ, ರಶ್ಮಿ , ಸಂಗಪ್ಪ, ಮಕ್ಕಳ ಡಾಕ್ಟರ್ ಗಳಾದ ಕುಷ್ವಂತ್ ಡಾಕ್ಟರ್, ಪುರುಷೋತಮ್ ಡಾಕ್ಟರ್, ಕುಮಾರ್ ಡಾಕ್ಟರ್ , ಸಲ್ಮಾ ಡಾಕ್ಟರ್, ಹೀಗೆ ಸಾಕಷ್ಟು ಡಾಕ್ಟರ್ ಗಳಿಂದ ಹಿಡಿದು ನರ್ಸ್ ಗಳ ತನಕ , ರೋಗಿಗಳಿಗೆ ಸಂಬಂಧಿಕರಂತೆ ಸ್ಪಂದಿಸುವ ಇವರನ್ನು ತೀರಾ ಹತ್ತಿರದಿಂದ ಕಂಡಾಗ ನಿಜಕ್ಕೂ ಧನ್ಯತೆಯಿಂದ ಮನಸ್ಸು ಭಾರವಾಗಿ ಹೋಗಿತ್ತು. ಇವತ್ತು ಡಿಸ್ಚಾರ್ಜ್ ಆಯಿತು. ನನ್ನ ಮಡದಿ ಮತ್ತು ಮಗುವನ್ನು ವಾರಪೂತ್ರಿ ಆರೈಕೆಯಿಂದ ಉಚಿತವಾಗಿ ಚಿಕಿತ್ಸೆನೀಡಿ, ಸಾಕಷ್ಟು ಕಾಳಜಿಯಿಂದ ನೋಡಿಕೊಂಡ ಸೌಮ್ಯಡಾಕ್ಟರ್, ಹರ್ಷಡಾಕ್ಟರ್, ನರ್ಸ್, ಡಿಗ್ರೂಪ್ ಸಿಬ್ಬಂದಿ ಗಳೆಲ್ಲರಿಗೂ ಕೈಮುಗಿದು ಹೊರಬಂದಿದ್ದೇನೆ. ಈ ಪೋಸ್ಟ್ ಓದುವ ಪ್ರತಿಯೊಬ್ಬರಿಗೂ ಒಂದು ಮನವಿ ನೀವಿರಬಹುದು ನಿಮ್ಮ ಕುಟುಂಬದವರಾಗಿರಬಹುದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರು ಮತ್ತು ನರ್ಸ್ ಗಳು ನಿಮ್ಮ ಬಗ್ಗೆ ಕಾಳಜಿ ವಹಿಸುವ ಸಂದರ್ಭದಲ್ಲಿ ಅವರ ಕಾರ್ಯವೈಖರಿ ನಿಮಗಿಷ್ಟವಾದರೆ ದಯವಿಟ್ಟು ಎರಡು ಕೈಜೋಡಿಸಿ ಅವರಿಗೆ ಮನಸ್ಸಾರೆ ಕೃತಜ್ಞತೆಗಳನ್ನು ತಿಳಿಸಿಬಿಡಿ. ಪ್ರತಿಯೊಬ್ಬ ಡಾಕ್ಟರ್ ಸಹ ನಿಮ್ಮಿಂದ ಇದನ್ನೇ ಬಯಸುತ್ತಾರೆ ಹಣದ ಹೊರತಾಗಿ. ನೀವು ನೀಡುವ ಚಿಲ್ಲರೆಹಣಕ್ಕಿಂತ ವೈದ್ಯರಿಗೆ ಇದಕ್ಕಿಂತಲೂ ದೊಡ್ಡ ಉಡುಗೊರೆ ಮತ್ತೊಂದಿರಲಿಕ್ಕೆ ಸಾಧ್ಯವೇ ಇಲ್ಲ. ಜಿಲ್ಲಾಸ್ಪತ್ರೆ ಮತ್ತೊಂದಷ್ಟು ಸುಸಜ್ಜಿತವಾಗಿ ಸಜ್ಜಾಗಲು ತಯಾರಾಗುತ್ತಿದೆ . ಇನ್ನೇನೂ ಕೆಲವೇ ತಿಂಗಳುಗಳಲ್ಲಿ ಹೊಸಕಟ್ಟಡದಲ್ಲಿ ರೋಗಿಗಳಿಗೆ ಸೇವೆ ಆರಂಭಗೊಳ್ಳುತ್ತದೆ. ಸ್ಕ್ಯಾನಿಂಗ್ ಸೇವೆಗಳು ಹೆಚ್ಚಾಗಲಿ, ಎಮ್ ಆರ್ ಸ್ಕ್ಯಾನಿಂಗ್ ಸೇವೆ ಅತೀ ಶೀಘ್ರದಲ್ಲಿ ಕೊಡಗಿನಲ್ಲಿಯೂ ಸಿಗುವಂತಾಗಲಿ.
(*ಅನುಭವ : ಸತ್ಯ_ಕರ್ಕೇರ, ಮಡಿಕೇರಿ*)