ಸುಂಟಿಕೊಪ್ಪ ಜೂ.15 : ಸುಂಟಿಕೊಪ್ಪ ಗ್ರಾ.ಪಂ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆ ಜಿಲ್ಲಾಡಳಿತ, ಕೊಡಗು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ಹಾಗೂ ಡಿಎಚ್‍ಓ ಡಾ.ಸತೀಶ್‍ಕುಮಾರ್ ವಿವಿಧ ವಾರ್ಡ್‍ಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
ನಂತರ ಸುಂಟಿಕೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಕೊಂಡ ಅಧಿಕಾರಿಗಳು ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳಲು ಸೂಚಿಸಿದರು.
ಮನೆಯ ಸುತ್ತ ಶುಚಿತ್ವ ಕಾಪಾಡಲು ಆದ್ಯತೆ ನೀಡಬೇಕು, ಚರಂಡಿಯಲ್ಲಿ ನೀರು ಕಟ್ಟಿರುವುದನ್ನು ತೆರವುಗೊಳಿಸಲು ಪಂಚಾಯಿತಿ ವತಿಯಿಂದ ಕ್ರಮ ಕೈಗೊಳ್ಳಬೇಕೆಂದರು.
ಈ ಸಂದರ್ಭ ಗ್ರಾ.ಪಂ ಸದಸ್ಯ ರಫೀಕ್‍ಖಾನ್ ಮಾತನಾಡಿ, ಶುಚಿತ್ವ ಈಗಾಗಲೇ ಜಾಷಧಿ ಸಿಂಪಡಿಸುವ ಕಾರ್ಯವನ್ನು ಪೌರ ಕಾರ್ಮಿಕರಿಂದ ನಿರ್ವಹಿಸಲಾಗಿದೆ ಎಂದು ತಿಳಿಸಿದರು.
ಮತ್ತೋರ್ವ ಸದಸ್ಯ ಪಿ.ಆರ್.ಸುನಿಲ್‍ಕುಮಾರ್ ಮಾತನಾಡಿ, ಸುಂಟಿಕೊಪ್ಪ ಗ್ರಾ.ಪಂ.ಗೆ ಕಸ ವಿಲೇವಾರಿಗಾಗಿ ವಾಹನದ ಅವಶ್ಯಕತೆ ಇದ್ದು, ಇರುವ 1 ವಾಹನದಿಂದ ಎಲ್ಲಾ ವಾರ್ಡ್‍ಗಳಿಗೆ ತೆರಳಿ ಕಸವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೊಂದು ವಾಹನದ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರದು.
7 ವಾರ್ಡ್‍ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬೋರ್‍ವೆಲ್ ಕೆಟ್ಟು ಹೋಗಿದೆ ಎಂದು ಮಾಹಿತಿ ನೀಡಿದರು.
ಪ್ರತಿಕ್ರಿಯೆ ನೀಡಿದ ಡಾ.ಆಕಾಶ್, ಕಸ ವಿಲೇವಾರಿಗೆ ಬದಲಿ ವಾಹನ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು, ಜಲಜೀವನ್ ಯೋಜನೆಯಡಿ ನೀರಿನ ಸೌಕರ್ಯ ಒದಗಿಸಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭ ತಾಲೂಕು ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಗತಿ, ಆರೋಗ್ಯ ನಿರೀಕ್ಷಕರಾದ ಶೀನಿವಾಸ್, ಮುತ್ತುರಾಜ್, ಜನಾರ್ಧನ, ವಿಶ್ವ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಇದ್ದರು.