ಮಡಿಕೇರಿ ಜೂ.16 : ಕಡಂಗ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಆದ್ಯ ಕ್ಲಿನಿಕ್ ಆರಂಭಗೊಂಡಿದ್ದು, ನರಿಯಂದಡ ಗ್ರಾ.ಪಂ ಸದಸ್ಯ ಕೋಡಿರ ವಿನೋದ್ ನಾಣಯ್ಯ ಉದ್ಘಾಟಿಸಿದರು.
ಸುತ್ತಮುತ್ತಲಿನ ಜನರು ಅನಾರೋಗ್ಯದಿಂದ ತುತ್ತಾದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಪಡೆಯಲು ಮತ್ತು ಇನ್ನಿತರ ತುರ್ತು ಸಮಯದಲ್ಲಿ ಇಂತಹ ಆರೋಗ್ಯ ಘಟಕಗಳು ಅನುಕೂಲವಾಗುತ್ತದೆ ಎಂದು ಆಶಿಸಿದರು.
ಈ ಸಂದರ್ಭ ಗ್ರಾ.ಪಂ ಸದಸ್ಯ ಸಿ.ಇ.ಸುಬ್ಬೀರ್ , ಸುಗುಣ, ಕಾಳಯ್ಯ, ಮಹಮ್ಮದ್ ಎಡಪಾಲ, ಕಡಂಗ ಜಮಾ ಅಂತ ಅಧ್ಯಕ್ಷ ಅಬ್ದುಲ್ಲ, ಎಡಪ್ಪಲ ಜಮಾಹತ್ ಅಧ್ಯಕ್ಷ ಶಾಫಿ , ಅನಿಸ್ ಬಿಲ್ಡಿಂಗ್ ಮಾಲೀಕ ಅಬೂಬಕರ್, ಪ್ರಮುಖರಾದ ಸಿ.ಎಚ್.ಮಮ್ಮು , ಅಬ್ದುಲ್ ರೆಹಮಾನ್, ಉಬೈಸ್, ವೈದ್ಯಾಧಿಕಾರಿಗಳಾದ ಅಮಲ್ , ಅಖಿಲ ಅಮಲ್ ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ : ನೌಫಲ್ ಕಡಂಗ









