ಮಡಿಕೇರಿ ಜೂ.16 : ಅಖಿಲ ಭಾರತ ಸಾಹಿತ್ಯ ಪರಿಷದ್ ವತಿಯಿಂದ ಜೂ.18 ರಂದು “ಕವಿತೆಗಳ ಮಳೆ” ವಿನೂತನ ಕವಿಗೋಷ್ಠಿ ನಡೆಯಲಿದೆ.
ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಸಂಜೆ 3 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, ಮಳೆಯ ಕುರಿತಂತೆ ಬರೆದ ಕವಿತೆಗಳನ್ನು ಕನ್ನಡ ಮತ್ತು ಪ್ರಾದೇಶಿಕ ಭಾಷೆಯ ಕವಿಗಳು ವಾಚಿಸಲಿದ್ದಾರೆ.
ಕಾರ್ಯಕ್ರಮನ್ನು ಅ.ಭಾ.ಸ.ಪ ವಿಭಾಗ ಸಂಯೋಜಕ ಶ್ರೀ ಸುಂದರ್ ಶೆಟ್ಟಿ ಉದ್ಘಾಟಿಸಲಿದ್ದು, ಕನ್ನಡ ಕಾವ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕೊಡಗಿನ ಖ್ಯಾತ ಕವಯತ್ರಿ ಸ್ಮಿತಾ ಅಮೃತರಾಜ್ ಅವರ ಜೊತೆಗೆ ಕವಿತೆಗಳ ಕುರಿತಾದ ಸಂವಾದವೂ ನಡಯಲಿದೆ.
ನೂತನವಾಗಿ ಆಯ್ಕೆಯಾದ ಅಖಿಲ ಭಾರತ ಸಾಹಿತ್ಯ ಪರಿಷದ್ ಕೊಡಗು ಘಟಕದ ಅಧ್ಯಕ್ಷ ಮೇಜರ್ ಡಾ.ಕುಶ್ವಂತ್ ಕೋಳಿಬೈಲು, ಜಿಲ್ಲಾ ಕಾರ್ಯದರ್ಶಿ ಬಬ್ಬೀರ ಸರಸ್ವತಿ ಮತ್ತು ಸರ್ವ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಜಿಲ್ಲೆಯ ಕವಿಗಳು ಮತ್ತು ಸಾಹಿತ್ಯಾಸಕ್ತರು ಪಾಲ್ಗೊಳ್ಳುವಂತೆ ಅಖಿಲ ಭಾರತ ಸಾಹಿತ್ಯ ಪರಿಷದ್ ಮನವಿ ಮಾಡಲಾಗಿದೆ.