ಮಡಿಕೇರಿ ಜು.18 : ಎಲ್ಲಾ ರಂಗಗಳಲ್ಲಿಯೂ ಬದಲಾವಣೆ ಆಗುತ್ತಿರುವ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿಯೂ ಬದಲಾವಣೆ ಅನಿವಾಯ೯ವಾಗಿದೆ ಎಂದು ಹಿರಿಯ ಪತ್ರಕತ೯ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿಯ ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿತ ಉಪನ್ಯಾಸಕಿ ಮತ್ತು ಲೇಖಕಿ ಕೆ.ಜಯಲಕ್ಷ್ಮಿ ವಿರಚಿತ ಚಪ್ಪಾಳೆಗೂ ಬೆಲೆ ಇದೆ ಪುಸ್ತಕವನ್ನು ಲೋಕಾಪ೯ಣೆ ಮಾಡಿ ಮಾತನಾಡಿದ ಚಿದ್ವಿಲಾಸ್, ಸಮಾಜದಲ್ಲಿನ ಪ್ರತೀ ಕ್ಷೇತ್ರವೂ ಆಧುನಿಕ ದಿನಮಾನಗಳ ಬೇಡಿಕೆಗೆ ತಕ್ಕಂತೆ ಬದಲಾವಣೆ ಆಗುತ್ತಿದೆ. ಎಲ್ಲಾ ರಂಗಗಳಲ್ಲಿಯೂ ಹೊಸತನದ ಗಾಳಿ ಬೀಸುತ್ತಿದೆ. ಸಾಹಿತ್ಯ ಕ್ಷೇತ್ರ ಕೂಡ ಅದಕ್ಕೆ ಹೊರತಾಗಿಲ್ಲ. ಸಾಹಿತ್ಯ ರಂಗದಲ್ಲಿಯೂ ಬದಲಾವಣೆ ಅನಿವಾಯ೯ವಾಗಿದೆ. ಮುಖ್ಯವಾಗಿ ಯುವಪೀಳಿಗೆಯನ್ನು ಆಕಷಿ೯ಸುವಂಥ ಸಾಹಿತ್ಯದ ಅನಿವಾಯ೯ತೆ ಇದೆ. ಮಕ್ಕಳಲ್ಲಿ ಆಸಕ್ತಿ ಸೖಷ್ಟಿಸುವ ಸಾಹಿತ್ಯದ ಆದ್ಯತೆ ಸಾಹಿತಿಗಳದ್ದಾಗಬೇಕಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಲೇಖಕರಿಗೆ ಸಾಹಿತ್ಯ ಲೋಕದ ಬದಲಾವಣೆ ಮತ್ತು ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಕಮ್ಮಟದ ಅಗತ್ಯವಿದ್ದು ಕನ್ನಡ ಪರ ಸಂಘಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆಯೂ ಚಿದ್ವಿಲಾಸ್ ಸಲಹೆ ನೀಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಕೊಡಗಿನಲ್ಲಿ ಬರಹಗಾತಿ೯ಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಕ್ಷೇತ್ರದತ್ತ ಒಲವು ತೋರುವ ಮೂಲಕ ಲೇಖಕಿಯರ ಕೊರತೆಯನ್ನು ನೀಗಿಸುತ್ತಿದ್ದಾರೆ. ಈಗಾಗಲೇ ಪರಿಷತ್ ವತಿಯಿಂದ ದಿ.ಗೌರಮ್ಮ ದತ್ತಿ ನಿಧಿ ಪ್ರಶಸ್ತಿಯನ್ನು 18 ಲೇಖಕಿಯರಿಗೆ ಚೊಚ್ಚಲ ಕೖತಿಗಳಿಗಾಗಿ ನೀಡಲಾಗಿದೆ ಎಂದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಲೇಖಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾಯ೯ಕ್ರಮಗಳಲ್ಲಿ ಪುಸ್ತಕಗಳನ್ನೇ ಕೊಡುಗೆಯಾಗಿ ನೀಡುವ ಸಂಪ್ರದಾಯ ಪ್ರಾರಂಭಿಸಲಾಗಿದ್ದು ಇದರಿಂದಾಗಿ ಅನೇಕ ಲೇಖಕರ ಕೖತಿಗಳು ಖರೀದಿಯಾಗಿದೆ ಎಂದು ನುಡಿದರು. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ದಿನದಲ್ಲಿ ಕೆಲ ಹೊತ್ತಾದರೂ ಮಕ್ಕಳನ್ನು ಮೊಬೈಲ್ ನಿಂದ ದೂರವಿರಿಸಿ, ಅವರಿಗೆ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವಂಥ ಮಾಹಿತಿಯನ್ನು ಪೋಷಕರು ನೀಡಬೇಕಾಗಿದೆ ಎಂದೂ ಕಾಮತ್ ಅಭಿಪ್ರಾಯಪಟ್ಟರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, 10 ವಷ೯ಗಳಿಂದ ನೂರಾರು ಲೇಖನಗಳನ್ನು ಬರೆದಿರುವ ಜಯಲಕ್ಷ್ಮಿ ಸಮಾಜಕ್ಕೆ ಉಪಯುಕ್ತವಾಗಬಲ್ಲ ತಮ್ಮ ಅನಿಸಿಕೆಗಳನ್ನು ಚಪ್ಪಾಳೆಗೂ ಬೆಲೆ ಇದೆ ಕೖತಿಯನ್ನು ತನ್ನದೇ ಆದ ಹೇರಂಭ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಈ ಮೂಲಕ ಕೊಡಗಿನ ಸಾಹಿತ್ಯಲೋಕಕ್ಕೆ ಮತ್ತೊಂದು ಪ್ರಕಾಶನ ಸಂಸ್ಥೆಯ ಕೊಡುಗೆ ದೊರಕಿದಂತಾಗಿದೆ ಎಂದರು. ಉಪನ್ಯಾಸಕಿಯಾಗಿರುವ ಜಯಲಕ್ಷ್ಮಿ ತಮ್ಮ ಅನುಭವಕ್ಕೆ ಬಂದ ಅನೇಕ ಘಟನೆಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಹೀಗಾಗಿ ಇದು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದ ನಡುವಿನ ಬೆಸುಗೆಯಂತಿದೆ ಎಂದೂ ಅನಿಲ್ ಶ್ಲಾಘಿಸಿದರು.
ಲೇಖಕಿ ಕೆ.ಜಯಲಕ್ಷ್ಮಿ ಮಾತನಾಡಿ, ಶಿಕ್ಷಕ ವೖತ್ತಿಯೊಂದಿಗೆ ಬರವಣಿಗೆಯನ್ನೂ ಹವ್ಯಾಸವಾಗಿ ರೂಡಿಸಿಕೊಂಡು ಬಂದಿದ್ದು, 10 ವಷ೯ಗಳಿಂದ ಬೇರೆ ಬೇರೆ ವಿಚಾರಗಳ ಬಗ್ಗೆ ಬರೆದಿರುವ ಲೇಖನಗಳನ್ನೇ ಇದೀಗ ಚಪ್ಪಾಳೆಗೂ ಬೆಲೆ ಇದೆ ಎಂಬ ಪುಸ್ತಕವಾಗಿ ಪ್ರಕಟಿಸಲಾಗಿದೆ. ಚಪ್ಪಾಳೆಯು ಪ್ರತೀಯೋವ೯ ವ್ಯಕ್ತಿಯ ಜೀವನದಲ್ಲಿಯೂ ಪ್ರೋತ್ಸಾಹದ ಮೂಲಕ ಸಾಧನೆಗೆ ಕಾರಣವಾಗುತ್ತದೆ. ಹೀಗಾಗಿಯೇ ಇದೇ ಶೀಷಿ೯ಕೆಯಲ್ಲಿ ಪುಸ್ತಕ ಪ್ರಕಟಿಸಿ 40 ಲೇಖನಗಳನ್ನು ದಾಖಲಿಸಿದ್ದಾಗಿ ಹೇಳಿದರು.
ತ್ರಿಭಾಷಾ ಸಾಹಿತಿ ಮೊಣ್ಣಂಡ ಶೋಭಾಸುಬ್ಬಯ್ಯ ಮಾತನಾಡಿ, ಚಪ್ಪಾಳೆಗೆ ಬೆಲೆ ಇದೆ ಎಂಬುದು ನಿಜವಾದರೂ ಕೆಲವೊಂದು ರಾಜಕೀಯ ಕಾಯ೯ಕ್ರಮಗಳನ್ನು ಗಮನಿಸಿದಾಗ ಅಲ್ಲಿ ಚಪ್ಪಾಳೆಗಿಂತ ಜನರೇ ಹೆಚ್ಚಾಗಿ ಕಂಡುಬರುತ್ತಾರೆ. ಚಪ್ಪಾಳೆಯನ್ನು ಪ್ರೋತ್ಸಾಹಕ್ಕಿಂತ ಬೇರೆ ಕಾರಣಗಳಿಗಾಗಿ ಬಳಸುತ್ತಾರೆ ಎಂದು ವಿಷಾಧಿಸಿದರು. ಆಧುನಿಕ ದಿನಗಳಲ್ಲಿ ಮಕ್ಕಳಲ್ಲಿ ಶಿಸ್ತು ಕಡಮೆಯಾಗಿದೆ. ಆದರೂ ಮಕ್ಕಳಲ್ಲಿ ಅತೀ ಹೆಚ್ಚಿನ ಶಿಸ್ತು ಕೂಡ ಮಾರಕವಾಗಿದೆ ಎಂದು ಶೋಭಾ ಸುಬ್ಬಯ್ಯ ಕಿವಿಮಾತು ಹೇಳಿದರು. ಇತ್ತೀಚಿನ ಕೆಲವು ಲೇಖಕರ ಬರಹಗಳು ಸ್ವಂತಿಕೆ ಕಳೆದುಕೊಂಡಿದೆ. ಕಂಪ್ಯೂಟರ್ ಜ್ಞಾನದ ಮೂಲಕ ಬರೆದಂತೆ ಕಂಡುಬರುತ್ತಿದೆ. ಜಯಲಕ್ಷ್ಮಿ ಇದಕ್ಕೆ ಅಪವಾದ ಎಂಬಂತೆ ನಮ್ಮ ಸುತ್ತಲಿನಲ್ಲಿಯೇ ಕಾಣುವ ಘಟನೆಗಳ ಆಧಾರದ ಮೇಲೆ ಲೇಖನ ಬರೆಯುತ್ತಾರೆ ಎಂದೂ ಹೆಮ್ಮೆ ವ್ಯಕ್ತಪಡಿಸಿದರು.
ಚಿತ್ರದುಗ೯ದ ಸಿರಿಗನ್ನಡ ಬಳಗದ ಸಂಚಾಲಕ ಚಳ್ಳಕೆರೆ ಯರ್ರಿ ಸ್ವಾಮಿ ಮಾತನಾಡಿ, ಬರಹಗಾರರು ಪ್ರೋತ್ಸಾಹವನ್ನು ಸಮಾಜದಿಂದ ಸಹಜವಾಗಿಯೇ ನಿರೀಕ್ಷಿಸುತ್ತಾರೆ. ಮಾಧ್ಯಮಗಳ ಬೆಂಬಲ ಕೂಡ. ನವಪೀಳಿಗೆಯ ಲೇಖಕರಿಗೆ ಅತ್ಯಗತ್ಯ ಎಂದರಲ್ಲದೇ, ಮೊಬೈಲ್ ನಿಂದ ಮಕ್ಕಳನ್ನು ದೂರವಿಡುವ ಅತ್ಯಗತ್ಯವಿದೆ ಎಂದು ಕರೆ ನೀಡಿದರು. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಮಕ್ಕಳು ಸಾಹಿತ್ಯ ಸಂಬಂಧಿತ ಪುಸ್ತಕಗಳನ್ನು ಓದುವುದನ್ನೇ ಕಡಮೆ ಮಾಡಿದ್ದಾರೆ. ಇದರಿಂದಾಗಿ ಪೋಷಕರು, ಮಕ್ಕಳ ನಡುವಿನ ಭಾವಾನಾತ್ಮಕ ಸಂಬಂಧ ಕಡೆಗಣಿಸಲ್ಪಡುತ್ತಿದೆ. ಎಂದು ಹೇಳಿದರು. ತಮ್ಮ ಪೋಷಕರಿಗೆ ಇತ್ತೀಚಿನ ತಂತ್ರಜ್ಞಾನದ ಬಗ್ಗೆ ಏನೂ ಗೊತ್ತಿಲ್ಲ ಎಂಬ ಭಾವನೆ ಮಕ್ಕಳಲ್ಲಿ ಮನೆಮಾಡಿದ್ದು ಹೀಗಾಗಿಯೇ ಹಿರಿಯರನ್ನು ನಿಲ೯ಕ್ಷ್ಯ ದೖಷ್ಟಿಯಿಂದ ಮಕ್ಕಳು ನೋಡುವಂತಾಗಿದೆ. ಇಂಥ ಕಲ್ಪನೆಗಳಿಗೆ ಅವಕಾಶ ಮಾಡಿಕೊಡದಂತೆ ಹಿರಿಯರು ಗಮನ ಹರಿಸಬೇಕೆಂದು ಅವರು ಸಲಹೆ ನೀಡಿದರು.
ಶಾಂತಹೆಗಡೆ ಸ್ವಾಗತಿಸಿ, ಸಂತೋಷ್ ಕುಡೆಕಲ್ ವಂದಿಸಿದ ಕಾಯ೯ಕ್ರಮವನ್ನು ಲೇಖಕಿ ಪ್ರತಿಮಾರೈ ನಿರೂಪಿಸಿದರು. ಗಾಯಕರಾದ ಚಿತ್ರಾ ಆಯ೯ನ್, ಅನ್ವಿತ್, ರೇಖಾ ಉಲ್ಲಾಸ್, ಶಾಂತಿ ಅಚ್ಚಯ್ಯ ಮತ್ತು ತಂಡದಿಂದ ಹಾಡುಗಾರಿಕೆ ಜರುಗಿತು. ಲೇಖಕಿ ಕೆ.ಜಯಲಕ್ಷ್ಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
::: ಪುಸ್ತಕ ಮಳಿಗೆಗಳು ಬೇಕು :::
ಕೊಡಗಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಲೇಖಕ, ಲೇಖಕಿಯರು ಕಂಡುಬರುತ್ತಿದ್ದಾರೆ. ಆದರೆ ಬಹುತೇಕರು ತಾವು ಬರೆದ ಪುಸ್ತಕಗಳ ಮಾರಾಟಕ್ಕೆ ಸಾಮಾಜಿಕ ಜಾಲತಾಣಗಳನ್ನೇ ಅವಲಂಭಿಸಿದ್ದಾರೆ. ಹೀಗಿರುವಾಗ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸೂಕ್ತವಾದ ಪುಸ್ತಕ ಮಳಿಗೆಯನ್ನು ಸ್ಥಾಪಿಸುವತ್ತ ಸಂಘಸಂಸ್ಥೆಗಳು ಮುಂದಾಗಬೇಕು. ಶಾಲಾಕಾಲೇಜುಗಳಿಗೂ ಅಗತ್ಯವಿರುವ ಪುಸ್ತಕಗಳು ಮಡಿಕೇರಿಯಲ್ಲಿಯೇ ದೊರಕುವಂಥ ವ್ಯವಸ್ಥೆಯಾಗಬೇಕು. ಹೀಗಾದಾಗ ಮತ್ತಷ್ಟು ಸಂಖ್ಯೆಯಲ್ಲಿ ಸಾಹಿತಿಗಳು, ಲೇಖಕರು ಕೊಡಗಿನಲ್ಲಿ ಕಂಡುಬರಲು ಸಾಧ್ಯವಿದೆ. (ಅನಿಲ್ ಎಚ್.ಟಿ. ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ)











