ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2022 ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಮಾಡಲಾಗಿದೆ.
1.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿಯ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ”ಅಳಿವಿನಂಚಿನಲ್ಲಿರುವ ಎರವ ಜನಾಂಗಕ್ಕೆ ಪ್ರೋತ್ಸಾಹ” ವರದಿಗೆ ಪಳೆಯಂಡ ಪಾರ್ಥ ಚಿಣ್ಣಪ್ಪ ಪಡೆದುಕೊಂಡಿದ್ದಾರೆ.
- ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ.ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ” ಉತ್ತಂಗ ಕಂಡಿದ್ದ ಸ್ಕೇಟಿಂಗ್ ಕ್ರೀಡೆ ರಿಂಕ್ ಹಾಕಿ ನೆನೆಗುದಿಯಲ್ಲಿ” ವರದಿಗೆ ಕಾಯಪಂಡ ಶಶಿ ಸೋಮಯ್ಯ ಪಡೆದುಕೊಂಡಿದ್ದಾರೆ.
- ಸಂಘದ ಮಾಜಿ ಉಪಾಧ್ಯಕ್ಷರಾದ ಸಿ.ಎನ್.ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿಯನ್ನು ದಿಗ್ವಿಜಯ ನ್ಯೂಸ್ ಚಾನಲ್ ನಲ್ಲಿ ಪ್ರಸಾರವಾಗಿರುವ ತುದಿಬಳ್ಳಿಯಿಂದ ಕಾಳು ಮೆಣಸು ಕೃಷಿ ಸುದ್ದಿಯ ವೀಡಿಯೋಗ್ರಫಿಗೆ ಕೆ.ಬಿ.ದಿವಾಕರ್ ಪಡೆದುಕೊಂಡಿದ್ದಾರೆ.
4.ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ಪ್ರಶಸ್ತಿಯನ್ನು ಪ್ರಜಾಸತ್ಯ ಪತ್ರಿಕೆಯಲ್ಲಿ ಪ್ರಕಟವಾದ ”ಕಾಡಾನೆಗಳ ಗ್ರಾಮ ವಾಸ್ತವ್ಯ-ಅನ್ನದಾತ ಹೈರಾಣ”ವರದಿಗೆ ಹಿರಿಕರ ರವಿ ಪಡೆದುಕೊಂಡಿದ್ದಾರೆ.
5.ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕಾಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್ ಅವರು ಪ್ರಗತಿಪರ ಹಾಲು ಉತ್ಪಾದಕರಾಗಿದ್ದ ಉಳುವಾರನ ಶೇಷಗಿರಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಹೈನುಗಾರಿಕೆ ವರದಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ”ನಾಪಂಡ ಬ್ರದರ್ಸ್ ಹಸು ಸಾಕಾಣಿಕೆ ಯಶೋಗಾಥೆ”ವರದಿಗೆ ಅಜ್ಜಮಾಡ ರಮೇಶ್ ಕುಟ್ಟಪ್ಪ ಪಡೆದುಕೊಂಡಿದ್ದಾರೆ.
6.ಸ್ವಸ್ಥ ಸಂಸ್ಥೆಯ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಶೈಕ್ಷಣಿಕ ವರದಿ ಪ್ರಶಸ್ತಿಯನ್ನು ಪ್ರಜಾಸತ್ಯ ಪತ್ರಿಕೆಯಲ್ಲಿ ಪ್ರಕಟವಾದ ಚಟುವಟಿಕೆ ಮೂಲಕವೇ ಎಲ್ಲಾ ವಿಷಯಗಳ ಕಲಿಕೆ”ವರದಿಗೆ ರವಿ ಎಸ್. ಪಡೆದುಕೊಂಡಿದ್ದಾರೆ.
7.ಬೆಳೆಗಾರ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ ತಾಯಿ ಅಜ್ಜಮಾಡ ಸುಬ್ಬಯ್ಯ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ತೋಟಗಾರಿಕಾ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ”ಲಾಭ ತರುವ ರಾಂಬೂಟಾನ್”ವರದಿಗೆ ಆದರ್ಶ್ ಅದ್ಕಲೇಗಾರ್ ಪಡೆದುಕೊಂಡಿದ್ದಾರೆ.
8.ಕೋವರ್ ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಚಂದ್ರಶೇಖರ್ ಅವರ ಹೆಸರಿನಲ್ಲಿ ಸ್ಥಾಪಿಸಿದ ಮಾನವೀಯ ವರದಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ”ಸೂರಿಲ್ಲದೆ ಸೊರಗಿದೆ ಹಾವು ಗೊಲ್ಲರ ಬದುಕು”ವರದಿಗೆ ದಿನೇಶ್ ಮಾಲಂಬಿ ಪಡೆದುಕೊಂಡಿದ್ದಾರೆ.
9.ಮಂಡಿಬೆಲೆ ರಾಜಣ್ಣ ತಮ್ಮ ತಾಯಿ ದ್ಯಾವಮ್ಮ ಶ್ಯಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ದೃಶ್ಯಮಾಧ್ಯಮ ವರದಿ ಪ್ರಶಸ್ತಿಯನ್ನು ಪಬ್ಲಿಕ್ ಟಿವಿ ನಲ್ಲಿ ಪ್ರಸಾರವಾದ ”ವರ್ಷದ ಬಳಿಕ ತವರಿಗೆ ಮರಳಿದ ಕುಶ ಆನೆ”ವರದಿಗೆ ಮಲ್ಲಿಕಾರ್ಜುನ ಪಡೆದುಕೊಂಡಿದ್ದಾರೆ.
10.ತೇನನ ರಾಜೇಶ್ ಅವರು ತಮ್ಮ ತಂದೆ ದಿವಂಗತ ತೇನನ ಸೋಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಸೇನೆಗೆ ಸಂಬಂಧಿಸಿದ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿಯನ್ನು ದಿಗ್ವಿಜಯ ಚಾನಲ್ ನಲ್ಲಿ ಪ್ರಸಾರವಾದ ”ಸ್ವಾತಂತ್ರ್ಯ ಭಾರತದ ಮೊದಲ ಜನರಲ್ ಪೀಲ್ಡ್ ಮಾರ್ಷಲ್ ಕಾರ್ಯಪ್ಪ” ವರದಿಗೆ ಬಾಚರಣಿಯಂಡ ಅನುಕಾರ್ಯಪ್ಪ ಪಡೆದುಕೊಂಡಿದ್ದಾರೆ.
11.ದಿವಂಗತ ಸಣ್ಣುವಂಡ ಎಂ ಚಂಗಪ್ಪ ಅವರ ಹೆಸರಿನಲ್ಲಿ ಕೊಡಗಿನ ಪತ್ರಕರ್ತರು ಸ್ಥಾಪಿಸಿರುವ ಸೇನೆಗೆ ಸಂಬಂಧಿಸಿದ ದೃಶ್ಯ ಮಾಧ್ಯಮ ವರದಿಗೆ ಚಿತ್ತಾರ ಚಾನಲ್ ನಲ್ಲಿ ಪ್ರಸಾರವಾದ ; ಮಾಜಿ ಯೋಧನ 103 ರ ಬದುಕು; ವರದಿಗೆ ವಿಶ್ವ ಕುಂಬೂರು ಪಡೆದುಕೊಂಡಿದ್ದಾರೆ.
12.ವಕೀಲರಾದ ಪಿ.ಕೃಷ್ಣಮೂರ್ತಿ ಅವರು ತಮ್ಮ ತಂದೆ ದಿವಂಗತ ಟಿ.ಕೆ.ಸುಬ್ರಹ್ಮಣ್ಯ ಭಟ್ ಪಂಜಿತ್ತಡ್ಕ ಅವರ ಸ್ಮರಣಾರ್ಥ ಸ್ಥಾಪಿಸಿರುವ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುವ ಮಾನವೀಯ ವರದಿ ಪ್ರಶಸ್ತಿಯನ್ನು ಚಾನಲ್ 24 ನಲ್ಲಿ ಪ್ರಸಾರವಾದ” ವರ್ಷಗಳ ಬಳಿಕ ಬೆಳಕು ಕಂಡ ಬಾಲೆ ”ವರದಿಗೆ ಕಿಶೋರ್ ರೈ ಕತ್ತಲೆ ಕಾಡು ಪಡೆದುಕೊಂಡಿದ್ದಾರೆ.
13.ಆಪ್ತ ಸಮಾಲೋಚಕಿ ತೇಲಪಂಡ ಆರತಿ ಸೋಮಯ್ಯ ತಮ್ಮ ಮಾವ ಕೋಟೆರ ಮುತ್ತಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಆರೋಗ್ಯ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ‘‘ಪ್ರಕಟವಾದ ಜಿಲ್ಲೆಯಲ್ಲಿ ಮೊದಲ ಯಶಸ್ವಿ ಟಿಹೆಚ್ಎ ಶಸ್ತ್ರಚಿಕಿತ್ಸೆ ; ವರದಿಗೆ ಆನಂದ್ ಕೊಡಗು ಪಡೆದುಕೊಂಡಿದ್ದಾರೆ.
14.ಸಂಘದ ಸದಸ್ಯರಾಗಿದ್ದ ಎಸ್.ಎ.ಮುರುಳೀಧರ್ ತಮ್ಮ ತಾಯಿ ಪಾರ್ವತ್ತಮ್ಮ ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಕೃಷಿ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ :ಬೇಸಿಗೆಯಲ್ಲಿ ಎರಡನೇ ಭತ್ತ ಬೆಳೆಯುತ್ತಿರುವ ರೈತ : ವರದಿಗೆ ಹೆಚ್.ಕೆ.ಜಗದೀಶ್ ಪಡೆದುಕೊಂಡಿದ್ದಾರೆ.
15.ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ;ನಿಶಾನೆಮೊಟ್ಟೆಯಲ್ಲಿ ಮತ್ತೆ ಹರಳುಕಲ್ಲು ದಂಧೆ ;ವರದಿಗೆ ಕುಯ್ಯಮುಡಿ ಸುನಿಲ್ ಪಡೆದುಕೊಂಡಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಈ ಎಲ್ಲಾ ಪ್ರಶಸ್ತಿಗಳನ್ನು ಸಂಘದ ವಾರ್ಷಿಕ ಮಹಾಸಭೆ ನಡೆಯುವ ದಿನದಂದು ನೀಡಿ ಗೌರವಿಸಲಾಗುವುದು.ಪ್ರಶಸ್ತಿ ಪಡೆದ ಎಲ್ಲಾ ಪತ್ರಕರ್ತ ಮಿತ್ರರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









