ಸುಂಟಿಕೊಪ್ಪ,ಜೂ.19 : ಸುಂಟಿಕೊಪ್ಪ ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾಗಿ ಮಾತಾಜಿ ಜ್ಯುವ¯ರ್ಸ್ ಮಾಲೀಕ ಬಿ.ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಗ್ರಾ.ಪಂ.ಸದಸ್ಯ ಎಂ.ಮಂಜುನಾಥ್ ನೇಮಕಗೊಂಡಿದ್ದಾರೆ.
ಮಾದಾಪುರ ರಸ್ತೆಯ ವೃಕ್ಷೋದ್ಭವ ಶಕ್ತಿ ಗಣಪತಿ ದೇವಾಲಯದ ಆವರಣದಲ್ಲಿ ನಡೆದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ 2023-24ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಉಪಾಧ್ಯಕ್ಷರಾಗಿ ಬಿ.ದಿವಾಕರ್ ಪೂಜಾರಿ, ಪುಳಂಜನ ಕುಶಾಲಪ್ಪ, ಬಿ.ಎಸ್.ರಮೇಶ್, ಜಂಟಿ ಕಾರ್ಯದರ್ಶಿಯಾಗಿ ದಿವಾಕರ್ ರೈ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ.ಎಸ್.ಸದಾಶಿವ ರೈ, ಬಿ.ಎಂ.ಸುರೇಶ್ (ಪುಟ್ಟ), ಮಹೇಶ್ ರೈ, ಸುನಿಲ್ ಕುಮಾರ್, ಸುರೇಶ್ ಚಂದು, ಮನುಅಚ್ಚಮಯ್ಯ, ಪವಿ, ಯಶೋಧರ, ಬಿ.ಆರ್.ಅರುಣ್ ಕುಮಾರ್, ಶಿವರಾಮನ್, ನಿಖಿಲ್ ಹರೀಶ್ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಎ.ಲೋಕೇಶ್ ಕುಮಾರ್ ತಿಳಿಸಿದ್ದಾರೆ.









