ನಾಪೋಕ್ಲು ಜೂ.19 : ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೇ ಬದುಕು ಸುಂದರವಾಗಿ ಸಾಗುತ್ತದೆ ಎಂದು ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು.
ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಏನಾದರು ಸಾಧಿಸಬೇಕು ಎಂದರೆ ಶಿಸ್ತು, ತಾಳ್ಮೆ, ಧೈರ್ಯ ಬಹಳ ಮುಖ್ಯವಾದುದು. ಹದಿಹರೆಯದ ವಯಸ್ಸಿನಲ್ಲಿ ಅನೇಕ ತಪ್ಪುಗಳು ಅರಿವು ಇದ್ದೋ, ಇಲ್ಲದೇನೋ ಅಗುವುದು ಆದರೆ ನಮ್ಮ ದೇಶದ ಕಾನೂನು ಅದಕ್ಕೆ ಅವಕಾಶ ನೀಡುವುದಿಲ್ಲ. ಎಲ್ಲಾರಿಗೂ ಸಮಾನವಾದ ಶಿಕ್ಷೆ ವಿಧಿಸುತ್ತದೆ. ಯಾರು ಕೂಡ ಸಂಚಾರಿ ನಿಯಮ ಉಲ್ಲಂಘನೆ, ಗಾಂಜಾ ಸೇವನೆ ಮಾಡಬಾರದು ಎಂದು ತಿಳಿಸಿದರು.
ನಾಪೋಕ್ಲು ಠಾಣಾಧಿಕಾರಿ ಮಂಜುನಾಥ ಮಾತನಾಡಿ, ವ್ಯಸನಗಳಿಂದ ಮುಕ್ತ ಹೊಂದಿ, ಜೀವನದಲ್ಲಿಯೇ ಸರಳ ಜೀವನ ನಡೆಸಿಕೊಂಡು ಉನ್ನತ ಧ್ಯೇಯ ಮತ್ತು ಗುರಿಯನ್ನು ಹೊಂದಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕಾವೇರಿ, ಎನ್.ಎನ್ .ಎಸ್ ಘಟಕದ ಮುಖ್ಯಸ್ಥೆ ಶ್ಯಾಮಲಾ, ಐ.ಕ್ಯೂ.ಎ.ಸಿ ಸಂಯೋಜಕ ಹೆಚ್.ಎಸ್. ನಂದೀಶ್ ಹಾಜರಿದ್ದರು.
ಉಪನ್ಯಾಸಕ ಜಿಷ್ಮ ಗಣ್ಯರಿಗೆ ಸ್ವಾಗತಿಸಿದರೆ, ಟಿ.ಎಲ್ ತ್ಯಾಗರಾಜು ವಂದಿಸಿದರು.








