ಮಡಿಕೇರಿ ಜೂ.20 : ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಳಮೇಂಗಡ ಬೋಸ್ ಮಂದಣ್ಣ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅಡ್ಡೇಂಗಡ ನವಿನ್, ಕಾರ್ಯದರ್ಶಿಯಾಗಿ ಅದೇಂಗಡ ಪುಟ್ಟು ಮಂದಣ್ಣ, ಖಚಾಂಚಿಯಾಗಿ ಅದೇಂಗಡ ಚಂದ್ರಶೇಖರ್, ಕ್ರೀಡಾ ಕಾರ್ಯದರ್ಶಿಯಾಗಿ ಕಾಡ್ಯಮಾಡ ಸುಬ್ಬಯ್ಯ ನೇಮಕಗೊಂಡಿದ್ದು, ನಿರ್ದೇಶಕರುಗಳಾಗಿ ಅಳಮೇಂಗಡ ದಿಲ್ಲು ತಿಮ್ಮಯ್ಯ, ಪೊಡಮಾಡ ಗಿರೀಶ್ ಮಾಚಯ್ಯ, ಮಾಚಂಗಡ ರೋಷನ್, ಮಲಚಿರ ಅನೀಶ್ ಬೋಪಣ್ಣ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಗಳಾಗಿ ಶಿಕ್ಷಕರುಗಳಾದ ಸುಬ್ಬಯ್ಯ, ರಾಘವೇಂದ್ರ ಮತ್ತು ಕಾಂಡೇರ ಡಾನ್ ಕುಶಾಲಪ್ಪ ಕಾರ್ಯನಿರ್ವಹಿಸಿದರು.