ನಾಪೋಕ್ಲು ಜೂ.21 : ಮುಂಗಾರು ಆರಂಭದ ಹಿನ್ನೆಲೆ ನಾಪೋಕ್ಲು ರೈತ ಸಂಪರ್ಕ ಕೇಂದ್ರದಲ್ಲಿ ಬೆಳೆಗಾರರಿಗೆ ವಿವಿಧ ಬಿತ್ತನೆ ಬೀಜಗಳನ್ನು ಒದಗಿಸಲು ಸಿದ್ಧತೆ ಮಾಡಲಾಗಿದೆ.
ನಾಪೋಕ್ಲು ಹೋಬಳಿಯಲ್ಲಿ ಶೇಕಡ 50ರ ಸಹಾಯಧನದಲ್ಲಿ ತುಂಗಾ ಆರ್ ಎನ್ ಆರ್ 1508 ಬೀಜಗಳು ಲಭ್ಯವಿದ್ದು, ಭತ್ತ ಬೆಳೆಯುವ ರೈತರು ತಮ್ಮ ಮೂಲ ಆಧಾರ್ ಕಾರ್ಡು ತೋರಿಸಿ ಬಿತ್ತನೆ ಬೀಜಗಳನ್ನು ಪಡೆಯಬಹುದು ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ








