ಮಡಿಕೇರಿ ಜೂ.21 : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ ನಿದೇ೯ಶಕ ದೇವಣಿರ ತಿಲಕ್ ರೋಟರಿ ವಲಯ 6 ರ ಸಹಾಯಕ ಗವನ೯ರ್ ಆಗಿ ನೇಮಕಗೊಂಡಿದ್ದಾರೆ.
ದೇವಣಿರ ತಿಲಕ್, ಮಡಿಕೇರಿ ರೋಟರಿ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ರೋಟರಿ ವುಡ್ಸ್, ವಿರಾಜಪೇಟೆ ರೋಟರಿ, ಗೋಣಿಕೊಪ್ಪ ರೋಟರಿ ಕ್ಲಬ್ ಮತ್ತು ಪಿರಿಯಾಪಟ್ಟಣ ರೋಟರಿ ಸಂಸ್ಥೆಗಳ ಸಹಾಯಕ ಗವನ೯ರ್ ಆಗಿ 2023-24 ನೇ ರೋಟರಿ ವಷ೯ದಲ್ಲಿ ಜು. 1 ನಿಂದ ಕಾಯ೯ನಿವ೯ಹಿಸಲಿದ್ದಾರೆ.
ಡಿ.ಎಂ.ತಿಲಕ್ 2017-18 ನೇ ಸಾಲಿನಲ್ಲಿ ರೋಟರಿ ಜಿಲ್ಲೆಯ ಸಾಜೆ೯ಂಟ್ ಎಟ್ ಆಮ್ಸ್೯ ಆಗಿ ಕಾಯ೯ನಿವ೯ಹಿಸಿದ್ದು, ಈವರೆಗೂ ರೋಟರಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾಯ೯ನಿವ೯ಹಿಸಿದ್ದಾರೆ.
ರೋಟರಿ ಮಿಸ್ಟಿ ಹಿಲ್ಸ್ ನ 18 ವಷ೯ಗಳ ಅವಧಿಯಲ್ಲಿ ಬಿ.ಕೆ.ರವೀಂದ್ರ ರೈ, ಡಾ.ಸಿ.ಆರ್.ಪ್ರಶಾಂತ್, ಅನಿಲ್ ಎಚ್.ಟಿ. ಸಹಾಯಕ ಗವನ೯ರ್ ಆಗಿ ಕಾಯ೯ನಿವ೯ಹಿಸಿದ್ದು, ಇದೀಗ ನಾಲ್ಕನೇ ಸಹಾಯಕ ಗವನ೯ರ್ ನ್ನು ಮಿಸ್ಟಿ ಹಿಲ್ಸ್ ನಿಂದ ವಲಯ 6 ಕ್ಕೆ ನೀಡಿರುವ ಹೆಗ್ಗಳಿಕೆಗೆ ಮಿಸ್ಟಿ ಹಿಲ್ಸ್ ಪಾತ್ರವಾಗಿದೆ.









