ಸೋಮವಾರಪೇಟೆ ಜೂ.22 : ವೀರಶೈವ ಸಮಾಜದ ಅಕ್ಕನ ಬಳಗದ ನೂತನ 2023-28ನೇ ಸಾಲಿನ ಆಡಳಿತ ಮಂಡಳಿ ರಚಿಸಲಾಗಿದೆ.
ಪಟ್ಟಣದ ಕರ್ಕಳ್ಳಿಯಲ್ಲಿರುವ ಅಕ್ಕನ ಬಳಗದ ಸಭಾಂಗಣದಲ್ಲಿ ಹಿಂದಿನ ಸಾಲಿನ ಅಧ್ಯಕ್ಷೆ ಜಲಜಾಶೇಕರ್ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಅದ್ಯಕ್ಷರಾಗಿ ಚಂದ್ರಕಲಾಗಿರಿಶ್, ಉಪಾಧ್ಯಕ್ಷರಾಗಿ ಗೀತರಾಜು, ಕಾರ್ಯದರ್ಶಿಯಾಗಿ ಮಾಯಾಗಿರೀಶ್, ಸಹ ಕಾರ್ಯದರ್ಶಿಯಾಗಿ ದಿವ್ಯ ದಯಾಕರ್, ಖಜಾಂಚಿಯಾಗಿ ಸರಿತಾ ಮಲ್ಲಿಕಾರ್ಜುನ್ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಆಶಾ ಹೂವಯ್ಯ, ನಂದಿನಿಮಾಂತೇಶ್, ಸವಿತಾ ನೀಲಕಂಠ, ಜಗದಾಂಬ ಗುರುಪ್ರಸಾದ್, ಸವಿತಾ ಶಿವಕುಮಾರ್, ರಜಿನಿ ಯತೀಶ್, ಮಂಜುಳ ಬಸವರಾಜು,ಅನುರಾಜು ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು.









