ಮಡಿಕೇರಿ ಜೂ.22 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಗು, ಜಿಲ್ಲಾ ಆಸ್ಪತ್ರೆ ಐಸಿಟಿಸಿ ವಿಭಾಗ, ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ, ಉದ್ಭವ್ ಸಂಸ್ಥೆ ಬೆಂಗಳೂರು, ಆಶೋದಯ ಸಮಿತಿ ಕೊಡಗು ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಕೊಯನಾಡುವಿನಲ್ಲಿ ವಲಸೆ ಕಾರ್ಮಿಕರು ಮತ್ತು ಎಸ್ಟೇಟ್‌ಗಳ ಕಾರ್ಮಿಕರಿಗೆ ಆರೋಗ್ಯ ತಪಾಸಣ ಶಿಬಿರ ನಡೆಯಿತು.
ಕಾರ್ಯಕ್ರಮಕ್ಕೆ ಸಂಪಾಜೆ ಗ್ರಾ.ಪಂ ಸದಸ್ಯ ನವೀನ್ , ಜಿಲ್ಲಾ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕರಾದ ಅಶ್ವಿತಾ, ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಪಿ.ಮಲ್ಲಿಕಾರ್ಜುನ, ಕೊಯನಾಡು ಥಾಮಸನ್ ಪ್ಲಾಂಟೇಶನ್ ನಿರ್ದೇಶಕರಾದ ಸುಜಾತ ಚಾಲನೆ ನೀಡಿದರು.
ಈ ಸಂದರ್ಭ ಅಸ್ಸಾಂ, ಕೇರಳ ಹಾಗೂ ಸ್ಥಳೀಯ ಕಾರ್ಮಿಕರು ಭಾಗವಹಿಸಿ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಮಾಹಿತಿ ಪಡೆದುಕೊಂಡರು.
ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಎಚ್ಓ, ಆಶಾ ಕಾರ್ಯಕರ್ತೆಯರು, ಜಿಲ್ಲಾ ಐಸಿಟಿಸಿ ಪ್ರಯೋಗ ಶಾಲಾ ತಂತ್ರಜ್ಞಾ ಸುರೇಶ್, ಆಶೋದಯ ಸಮಿತಿ ಆಪ್ತ ಸಮಾಲೋಚಕ ಸಂತೋಷ್ ಕುಮಾರ್ ಸಂಪಾಜೆ, ಸಿಬ್ಬಂದಿಗಳಾದ ಮಂಜುಳಾ, ಧನ್ಯ ಹಾಜರಿದ್ದರು.
ಒಟ್ಟು 35 ಪಲಾನುಭವಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು.








