ಮಡಿಕೇರಿ ಜೂ.22 : ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ಚೆಂಬು, ಪೆರಾಜೆ ಹಾಗೂ ಸಂಪಾಜೆ ಗ್ರಾಮಗಳಿಗೆ ಸಂಬಂದಿಸಿದ ಪೌತಿ/ ವಾರಸುದಾರಿಕೆ ಖಾತೆ ಆಂದೋಲನ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಜೂ.27 ರಂದು ಬೆಳಗ್ಗೆ 11 ಗಂಟೆಗೆ ಸಂಪಾಜೆ ನಾಡ ಕಚೇರಿಯಲ್ಲಿ ನಡೆಯಲಿದೆ.
ಪೌತಿ /ವಾರಿಸುದಾರಿಕೆ ಖಾತೆ ಸಂಬಂಧ ಖಾತೆದಾರರ ಮರಣ ದೃಢೀಕರಣ ಪತ್ರ, ಆರ್‍ಡಿ ಸಂಖ್ಯೆಯ ವಂಶವೃಕ್ಷ ದೃಢೀಕರಣ ಪತ್ರ, ಚಾಲ್ತಿ ಸಾಲಿನ ಪಹಣಿ ಜೊತೆಗೆ ಕಲಂ 10 ರಲ್ಲಿ ದಾಖಲಾಗಿರುವ ಮ್ಯೂಟೇಷನ್ ಪ್ರತಿ/ ಜಮಾಬಂಧಿ ಹಾಗೂ ಆಧಾರ್ ಪ್ರತಿ ಮತ್ತು ದೂರವಾಣಿ ಸಂಖ್ಯೆ ಹಾಜರು ಪಡಿಸಲು ಕಿರಣ್ ಗೌರಯ್ಯ ಅವರು ತಿಳಿಸಿದ್ದಾರೆ.
ಚೆಂಬು ಪೆರಾಜೆ ಹಾಗೂ ಸಂಪಾಜೆ ವ್ಯಾಪ್ತಿಯ ಎಲ್ಲ ರೈತಭಾಂದವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಂದಾಯ ಪರಿವೀಕ್ಷಕ ವೆಂಕಟೇಶ್ ಕೋರಿದ್ದಾರೆ.









