ಸುಂಟಿಕೊಪ್ಪಜೂ.23 : ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಪರಿಹಾರ ಕಾಣದ ಡೆಂಗ್ಯೂ ಜ್ವರ ನಿವಾರಣೆಗಾಗಿ ಟೊಂಕ ಕಟ್ಟಿ ನಿಂತಿರುವ ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಸುಂಟಿಕೊಪ್ಪ ವ್ಯಾಪ್ತಿಯಲ್ಲಿನ ಸೊಳ್ಳೆಗಳನ್ನು ಹಿಡಿದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಫಲಿತಾಂಶ ತಿಳಿಯಲು ಮುಂದಾಗಿದ್ದಾರೆ.
ಹಾಸನ ಮತ್ತು ಮೈಸೂರಿನಿಂದ ಕೀಟಾಣು ಶಸ್ತ್ರಜ್ಞನರ ತಂಡ ಡಾ.ರಾಜೇಶ್ ಕುಲಕರ್ಣಿಯವರ ನೇತೃತ್ವದದಲ್ಲಿ ಬಂದಿದ್ದು, ಸುಂಟಿಕೊಪ್ಪದ ಮೊದಲನೇ 1ನೇ ವಿಭಾಗ, 2ನೇ ವಿಭಾಗದ ಅಪ್ಪಾರಂಡ ಬಡಾವಣೆ ಮತ್ತಿತರ ಭಾಗಗಳಲ್ಲಿ ಮುಂದಿನ ನಾಲ್ಕೈದು ದಿನಗಳಕಾಲ ಸೊಳ್ಳೆಗಳನ್ನು ಹಿಡಿದು ಪ್ರಯೋಗಾಲಯಕ್ಕೆ ಕಳುಹಿಸುವ ಮೂಲಕ ಯಾವ ರೀತಿಯ ಸೊಳ್ಳೆ ಮತ್ತು ಇದು ಹರಡುವ ಖಾಯಿಲೆ ಯಾವುದು ಈ ಸೊಳ್ಳೆಗಳ ಕಡಿತದಿಂದಲೇ ಜ್ವರ ಬಾಧಿಸುತ್ತಿರುವುದು ನಿಜವೇ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಲಿದೆ.
ಈ ನಿಟ್ಟಿನಲ್ಲಿ ಸುಂಟಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿನಂಪ್ರತಿ ಭೇಟಿ ನೀಡುತ್ತಿದ್ದು, ಪ್ರತಿನಿತ್ಯದ ರೋಗಿಗಳ ವಿವರವನ್ನು ಸೂಕ್ತ ಚಿಕಿತ್ಸೆಯ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಜವಾಬ್ದಾರಿ ನೀಡಲಾಗಿದು,್ದ ಈ ವ್ಯಾಪ್ತಿಯ ಎಲ್ಲಾ ಆಶಾ ಕಾರ್ಯಕರ್ತೆಯರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ.








