ಮಡಿಕೇರಿ ಜೂ.23 : ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಪರಾಧ ಪ್ರಕರಣವೊಂದರ ಆರೋಪಿಯಾಗಿರುವ ಜಿಲ್ಲೆಯ ವ್ಯಕ್ತಿಯೋರ್ವರ ಪತ್ತೆಗೆ ಸಹಕರಿಸಲು ಪೊಲೀಸ್ ಪ್ರಕಟಣೆ ಕೋರಿದೆ.
ಕಳೆದ 2017ನೇ ಇಸವಿಯಲ್ಲಿ ಮಹಿಳಾ ಸಂಬಂಧಿತ ವಿಚಾರವಾಗಿ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ವಿರಾಜಪೇಟೆ ನಿವಾಸಿ ರಾಜೇಶ್ ಪೂಜಾರಿ ಎಂಬವರ ಮೇಲೆ ಪ್ರಕರಣ ದಾಖಲಾಗಿತ್ತು.
ಇದಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ನ್ಯಾಯಾಲಯದಿಂದ ಹಲವು ಬಾರಿ ದಸ್ತಗಿರಿ ವಾರಂಟ್ ಜಾರಿಯಾಗಿತ್ತು. ಆದರೆ, ಈತನವೂ ಆರೋಪಿ ರಾಜೇಶ್ ಪೂಜಾರಿ ಪತ್ತೆಯಾಗಿಲ್ಲ. ಸದ್ರಿ ಪ್ರಕರಣದ ಬಗ್ಗೆ ನ್ಯಾಯಾಲಯದಿಂದ ಉದ್ಘೋಷಣೆ ಹೊರಡಿಸಲಾಗಿದ್ದು, ಈತನ ಬಗ್ಗೆ ಸುಳಿವು ದೊರೆತಲ್ಲಿ ಕಾವೂರು ಪೊಲೀಸ್ ಠಾಣೆ/ 0824-220533, ಪೊಲೀಸ್ ನಿರೀಕ್ಷಕರು 9480802346 ಅಥವಾ ಉಪ ನಿರೀಕ್ಷಕರು 9480805358 ಸಂಖ್ಯೆಗೆ ಮಾಹಿತಿ ನೀಡಲು ಪೊಲೀಸ್ ಪ್ರಕಟಣೆ ಕೋರಿದೆ.









