ಮಡಿಕೇರಿ ಜೂ.24 : ಶನಿವಾರಸಂತೆಯ ಕೈಸರವಳ್ಳಿ ಅರಣ್ಯದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದೆ.
ಹುಲುಬೆ ಮರದ ಕೊಂಬೆಗೆ ಪಂಚೆಯಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದೆ. ಅಂದಾಜು 1 ತಿಂಗಳ ಹಿಂದೆ ನೇಣು ಬಿಗಿದುಕೊಂಡು ಮೃತರಾಗಿರಬಹುದು ಎಂದು ಶನಿವಾರಸಂತೆ ಪೊಲೀಸ್ ನಿರೀಕ್ಷಕ ಪರಶಿವಮೂರ್ತಿ ತಿಳಿಸಿದ್ದಾರೆ.
ಶ್ರೀನಿವಾಸ ಎಂಬವರಿಗೆ ಮಲ್ಲಿಪಟ್ಟಣ ಹೋಬಳಿಯ ಮಾಗಲು-ಕೊಪ್ಪಲು ಗ್ರಾಮದ ನಾಗಯ್ಯ ಎಂಬವರು ದೂರವಾಣಿ ಕರೆ ಮಾಡಿ ಕೈಸರವಳ್ಳಿ ಅರಣ್ಯದಲ್ಲಿ ಮೃತದೇಹ ಇರುವ ಬಗ್ಗೆ ತಿಳಿಸಿದ ಮೇರೆಗೆ ಪೊಲೀಸರು ಶ್ರೀನಿವಾಸ ಹಾಗೂ ಅರಣ್ಯ ರಕ್ಷಕ ಲೋಹಿತ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತದೇಹವನ್ನು ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಮೃತ ವ್ಯಕ್ತಿ ಆಕಾಶ ನೀಲಿ ಬಣ್ಣದ ಸಣ್ಣ ಚೌಕಳಿಯ ಉದ್ದ ತೋಳಿನ ಶರ್ಟ್ ಧರಿಸಿದ್ದು, ಶರ್ಟ್ ಕಾಲರಿನಲ್ಲಿ ಎಕ್ಸಪೊ ಟೈಲರ್ಸ್ ಪೇಟೆ ಅರಕಲಗೂಡು 9448996645 ಎಂಬುದಾಗಿ ಬರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.









