ಮಡಿಕೇರಿ ಜೂ.24 : ವ್ಯಾಂಡಮ್ ಎಂಟರ್‌ಪ್ರೈಸಸ್ ನ 28ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಪ್ರತೀ 2000 ಖರೀದಿಗೆ ನೀಡಲಾಗುವ ಉಚಿತ ಕೂಪನ್ “ಲಕ್ಕಿ ಡ್ರಾ” ಸಮಾರಂಭವು ಜೂ.25 ರಂದು ನಡೆಯಲಿದೆ.
ವ್ಯಾಂಡಮ್ ಎಂಟರ್‌ಪ್ರೈಸಸ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಲಯನ್ ಅಂಬೆಕಲ್ ನವೀನ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷೆ, ಕೊಡವ ಸಮಾಜದ ನಿರ್ದೇಶಕಿ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಲಯನ್ ಕನ್ನಂಡ ಕವಿತಾ ಕಾವೇರಮ್ಮ ಪಾಲ್ಗೊಳ್ಳಲಿದ್ದಾರೆ.
ಗೌರವ ಉಪಸ್ಥಿತರಾಗಿ ಶಿಕ್ಷಕಿ ಲಯನ್ ಜಿ.ವನಜಾಕ್ಷಿ ದಾಮೋದರ್ ಭಾಗವಹಿಸಲಿದ್ದಾರೆ ಎಂದು ವ್ಯಾಂಡಮ್ ಎಂಟರ್‌ಪ್ರೈಸಸ್ ಮಾಲೀಕ ಲಯನ್ ಕೆ.ಕೆ.ದಾಮೋದರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ 9448125571, 9449125571, 08272-225571 ಸಂಪರ್ಕಿಸಬಹುದಾಗಿದೆ.








