ಸುಂಟಿಕೊಪ್ಪ ಜೂ.23: ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ ಚುನಾವಣೆ ನಡೆದು ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಮಕ್ಕಳಲ್ಲಿ ಸಾರ್ವತ್ರಿಕ ಮತದಾನ ಪ್ರಕ್ರಿಯೆಯ ಕುರಿತು ಮಾಹಿತಿ ಅರಿವು ಮೂಡಿಸುವ ದಿಸೆಯಲ್ಲಿ ಶಾಲಾವರಣದಲ್ಲಿ ಮತದಾನದ ಮಾಹಿತಿಯ ಬ್ಯಾನರ್‍ಗಳನ್ನು ಅಳವಡಿಸಲಾಗಿತ್ತು.
ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಮತ ಕೇಂದ್ರ ಅಧಿಕಾರಿಗಳನ್ನು ನೇಮಕಗೊಳಿಸುವ ಮೂಲಕ ಮಕ್ಕಳ ಸಂಸತ್‍ಗೆ ಮತದಾನದಕ್ಕೆ ಅವಕಾಶ ಕಲ್ಪಿಸಿದರು. ಆಧಾರ್ ಕಾರ್ಡ್‍ಗಳನ್ನು ಹಿಡಿದು ಮಕ್ಕಳು ಸರತಿ ಸಾಲಿನಲ್ಲಿ ನಿಂತು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಚುನಾವಣಾ ಮೇಲ್ವಿಚಾರಣೆಯನ್ನು ಶಾಲಾ ಮುಖ್ಯೋಪಾದ್ಯಾಯರಾದ ಬಾಲಕೃಷ್ಣ, ಸಹಶಿಕ್ಷಕರುಗಳಾದ ಸಿ.ಟಿ.ಸೋಮಶೇಖರ್, ಎಸ್.ಪ್ರಕಾಶ್, ಲಿಯೋನ, ಆರ್.ಚಿತ್ರಾ, ಶಾಂತ ಹೆಗಡೆ, ಜಯಶ್ರೀ ನಿರ್ವಹಿಸಿದರು.









