ಮಡಿಕೇರಿ ಜೂ.28 : ಕುಶಾಲನಗರದ ನಿವಾಸಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಲೆಕ್ಕ ವಿಭಾಗದ ಪ್ರಥಮ ದರ್ಜೆ ಸಹಾಯಕ ಅಬ್ದುಲ್ ಬಷೀರ್ ನಿವಾಸದ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.
ಆದಾಯ ಮೀರಿದ ಆಸ್ತಿ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದ ತಂಡ ಕುಶಾಲನಗರದ ಗೊಂದಿಬಸವನಹಳ್ಳಿಯಲ್ಲಿರುವ ಅಬ್ದುಲ್ ಬಷೀರ್ ನಿವಾಸದ ಮೇಲೆ ಮುಂಜಾನೆ ವೇಳೆ ದಾಳಿ ಮಾಡಿ ದಾಖಲೆ ಹಾಗೂ ಆಸ್ತಿಯನ್ನು ಪರಿಶೀಲಿಸಿತು.
ಈ ಸಂದರ್ಭ ಮನೆಯಲ್ಲಿ ನಗದು, ಚಿನ್ನ, ವಾಹನಗಳು, ಬ್ಯಾಂಕಿನಲ್ಲಿ ಠೇವಣಿ, ಮತ್ತೊಂದು ಮನೆ ಇರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ ಎಂದು ಹೇಳಲಾಗಿದೆ.
ಮೈಸೂರು ವಿಭಾಗದ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರೆದಿದೆ.










