ನಾಪೋಕ್ಲು ಜು.2 : ಲಯನ್ಸ್ ಕ್ಲಬ್ ನಿಂದ ನಮಗೆ ಏನು ಲಾಭ ಎನ್ನುವ ಬದಲು ನಾವು ಲಯನ್ಸ್ ಕ್ಲಬ್ ಮೂಲಕ ಸಮಾಜಕ್ಕೆ ಏನು ಕೊಡಬಲ್ಲೆವು ಎನ್ನುವುದು ಮುಖ್ಯವಾಗಿರಬೇಕೆಂದು ಲಯನ್ಸ್ ಉಪರಾಜ್ಯಪಾಲೆ ಭಾರತೀ ಬಿ.ಎಂ ಹೇಳಿದರು. ಅವರು ನಾಪೋಕ್ಲು ಕೊಡವ ಸಮಾಜದಲ್ಲಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸ್ನೇಹ ವಾತ್ಸಲ್ಯದೊಂದಿಗೆ ಸೇವಾ ಮನೋಭಾವವನ್ನು ವೃದ್ಧಿಸಿಕೊಂಡು ಸಮಾಜಮುಖಿ ಕೆಲಸ ಮಾಡಲು ಲಯನ್ಸ್ ಕ್ಲಬ್ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಒಳಿತಿಗೆ ಪ್ರತಿಯೊಬ್ಬರು ಲಯನ್ಸ್ ಸಂಸ್ಥೆಯ ಜೊತೆ ಕೈಜೋಡಿ ಸಹಕರಿಸುವಂತೆ ಮನವಿ ಮಾಡಿದರು.
ನಂತರ ನೂತನವಾಗಿ ಆಯ್ಕೆಯಾಗಿರುವ ಕ್ಲಬ್ ನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಮಾರ್ಗದರ್ಶನ ನೀಡಿ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ನ ಬ್ಯಾನರ್ ಹಾಗೂ 5. ಸಾವಿರ ರೂ ದೇಣಿಗೆಯನ್ನು ನಾಪೋಕ್ಲು ಕ್ಲಬ್ಬಿನ ಪದಾಧಿಕಾರಿಗಳಿಗೆ ನೀಡಿ ಶುಭ ಹಾರೈಸಿದರು. ನಿರ್ಗಮಿತ ಅಧ್ಯಕ್ಷ ಕುಂಡಿಯೊಳಂದ ಗಣೇಶ್ ಮುತ್ತಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದ ವೇದಿಕೆಯಲ್ಲಿ ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಕೋಟೆರ ಶಾಶ್ವತ್ ಬೋಪಣ್ಣ, ಪ್ರಾಂತೀಯ ನಿರ್ದೇಶಕ ಅಂಬೆಕಲ್ ನವೀನ್, ವಲಯ ಅಧ್ಯಕ್ಷ ಮುಕ್ಕಾಟಿರ ವಿನಯ್ ಉಪಸ್ಥಿತರಿದ್ದರು, ನೂತನ ಅಧ್ಯಕ್ಷರಾಗಿ ಕನ್ನಂಬೀರ ಸುಧಿ ತಿಮ್ಮಯ್ಯ. ಕಾರ್ಯದರ್ಶಿ ಮಾದೆಯoಡ ಕುಟ್ಟಪ್ಪ, ಖಾಜಾoಜಿ ಅಪ್ಪುಮನಿಯoಡ ಬನ್ಸಿ ಭೀಮಯ್ಯ,ಲಿಯೋ ಕ್ಲಬ್ಬಿನ ನೂತನ ಅಧ್ಯಕ್ಷೆ ಕೇಟೋಳಿರ ಗಾಯನ ಚರ್ಮನ, ಕಾರ್ಯದರ್ಶಿ ಶಿವಚಾಳಿಯoಡ ಮಾನ್ಯ ಕಾಳಪ್ಪ, ಖಜಾಂಚಿ ರಿಜ್ವಾನ್, ಉಪ ಅಧ್ಯಕ್ಷ ಮಾದೆಯoಡ ರೋಹನ್ ಮಾಚಯ್ಯ, ಲಯನ್ಸ್ ಪ್ರಮುಖ ಸದಸ್ಯರಾದ ಕಲಿಯಂಡ ಬಿ. ಕಾಳಪ್ಪ, ಡಾ.ಬೊಪ್ಪಂಡ ಜಾಲಿ ಬೊಪಯ್ಯ, ಕೇಟೋಳಿರ ಎಸ್. ಕುಟ್ಟಪ್ಪ, ಕಲಿಯಂಡ ಸಾಬು ಅಯ್ಯಣ್ಣ, ಕುಂಡಿಯೊಳಂದ ರಮೇಶ್ ಮುದ್ದಯ್ಯ, ಎಲ್ತ್0ಡ ಎಸ್.ಬೋಪಣ್ಣ ,ಚೌರಿರ ಉದಯ, ಅಪ್ಪಾರಂಡ ಶುಭಾಷ್ ತಿಮ್ಮಯ್ಯ, ಕುಂಚೇಟ್ಟಿರ ರೇಷ್ಮಾ ಉತ್ತಪ್ಪ, ಶಿವಚಾಳಿಯoಡ ಲವ ಕಾಳಪ್ಪ, ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ, ಡಾ. ಕೋಟೆರ ಪಂಚಮ್ ತಿಮ್ಮಯ್ಯ,ಕಾಂಡಂಡ ರೇಖಾ ಪೊನ್ನಣ್ಣ, ಬಿದ್ದಾಟoಡ ಮೇರಿ ಚಿಟ್ಟಿಯ, ಕಾಂಡಂಡ ಪೊನ್ನಣ್ಣ, ಶ್ಯಾಮ್ ಬಿದ್ದಪ್ಪ, ಬೊಪ್ಪೇರ ಉತ್ತಪ್ಪ, ಮಂದಪಂಡ ಸತೀಶ್ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು. ಶ್ರೀರಕ್ಷ ಪ್ರಭಾಕರ ಪ್ರಾರ್ಥಿಸಿದರು, ಮಾಚಯ್ಯ ಧ್ವಜ ವಂದನೆ ಮಾಡಿದರು, ಕುಟ್ಟಪ್ಪ ವಂದಿಸಿದರು. (ವರದಿ: ದುಗ್ಗಳ ಸದಾನಂದ)