ನಾಪೋಕ್ಲು ಜು.3 : ಪಡಿಯಾಣಿ ಗ್ರಾಮದಲ್ಲಿರುವ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಶಾಖೆಯ ಅದೀನದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ನೂರುಲ್ ಉಲಮಾ ಸುನ್ನೀ ಸೆಂಟರ್ ಕಟ್ಟಡದ ಶೀಲಾನ್ಯಾಸ ಕಾರ್ಯಕ್ರಮವನ್ನು ಕುರ್ರತು ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನೆರವೇರಿಸಿದರು.
ಬಳಿಕ ಮಾತನಾಡಿದ ಫಝಲ್ ಕೊಯಮ್ಮ ತಂಙಳ್ ನಾಡಿನಲ್ಲಿ ಎಲ್ಲರೂ ಸಹನೆ,ಸಹಬಾಳ್ವೆ, ಐಕ್ಯತೆಯಿಂದ ಜೀವನ ಸಾಗಿಸುವಂತ್ತಾಗಬೇಕು. ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲು ದೇವರು ಕರುಣಿಸಲಿ, ಇಂತಹ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ನಾಹಿಬ್ ಖಾಝಿ ಶಾದುಲಿ ಫೈಝಿ, ಎಸ್ ವೈ ಎಸ್ ಕರ್ನಾಟಕ ರಾಜ್ಯ ಘಟಕದ ಸದಸ್ಯರಾದ ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ತಂಙಳ್ ಎಮ್ಮೆಮಾಡು,ಅಝೀ ಝ್ ತಂಙಳ್, ಷರಫುದ್ದಿನ್ ತಂಙಳ್, ಇಶಾಕ್ ತಂಙಳ್, ಹಬೀಬ್ ತಂಙಳ್, ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್, ಎಸ್ ವೈ ಎಸ್ ಮಡಿಕೇರಿ ಜೋನ್ ಅಧ್ಯಕ್ಷರಾದ ಮುನೀರ್ ಮಲ್ ಹರಿ, ಪಡಿಯಾಣಿ ಎಸ್ ವೈ ಎಸ್ ಅಧ್ಯಕ್ಷರಾದ ಬಿ.ಎ ಮೊಯಿದ್ದೀನ್,ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಅಬ್ಬಾಸ್ ಸಖಾಫಿ, ಪಡಿಯಾಣಿ ಜಮಾಅತ್ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್,ಖತೀಬರಾದ ಅಬ್ದುಲ್ ಗಫೂರ್ ಸಖಾಫಿ, ಗ್ರಾಮ ಪಂಚಾಯಿತಿ ಸದಸ್ಯರಾದ ಯೂಸುಫ್, ಇಸ್ಮಾಯಿಲ್, ಗಫೂರ್ ಹಾಗೂ ಮತಿತ್ತರಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು