ಕಡಂಗ ಜು.4 : ಎಸ್ವೈಎಸ್ ಆಮಿಲ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸಮಸ್ತದ 97ನೇ ಸ್ಥಾಪಕ ದಿನದ ಪ್ರಯುಕ್ತ ರಕ್ತ ದಾನ ಶಿಬಿರ ನಡೆಯಿತು.
ವಿರಾಜಪೇಟೆ ಶಾಫಿ ಜುಮಾಮಸೀದಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ರಕ್ತ ನಿಧಿ ಕೇಂದ್ರ ಹಾಗೂ ಎಸ್ ವೈ ಎಸ್ ಆಮಿಲ ಕೊಡಗು ಜಿಲ್ಲಾ ಸಮಿತಿ ವತಿಯಿಂದ ರಕ್ತದಾನ ಶಿಬಿರವನ್ನು ವಿರಾಜಪೇಟೆ ಮದರಸ ಸಭಾಂಗಣದಲ್ಲಿ ನಡೆಸಲಾಯಿತು.
ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಮುಖ್ಯಸ್ಥ ಡಾ.ಕರುಂಬಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾತನಾಡಿ ರಕ್ತದಾನದ ಮಹತ್ವವನ್ನು ತಿಳಿಸಿದರು.
ವಿರಾಜಪೇಟೆ ಹಾಗೂ ಸುತ್ತಮುತ್ತಲಿನ ಯುವರು ರಕ್ತದಾನ ಮಾಡಿದರು. ದಾನಿಗಳಿಗೆ ಅಭಿನಂದನಾ ಪತ್ರವನ್ನು ನೀಡಲಾಯಿತು.
ಶಿಬಿರದಲ್ಲಿ ಎಸ್ ವೈ ಎಸ್ ಮುಖ್ಯಸ್ಥ ಸಿಪಿಎಂ ಬಶೀರ್ ಹಾಜಿ , ವಿರಾಜಪೇಟೆ ಶಾಫಿ ಜುಮಾ ಮಸೀದಿ ಕಾರ್ಯದರ್ಶಿ ಆಲಿ, ಅಬ್ದುಲ್ ರಹವುಫ್, ಷರೀಫ್ ಮುಂತಾದ ಗಣ್ಯರು ಹಾಜರಿದ್ದರು.
ವರದಿ : ನೌಫಲ್ ಕಡಂಗ