ಮಡಿಕೇರಿ ಜು.4 : ಕೊಡಗು ಜಿಲ್ಲೆಯ ಗಡಿ ಗ್ರಾಮ ಕರಿಕೆಯ ಅನಪಾರೆ ಗ್ರಾಮದ ನಿವಾಸಿ ಲಿಬೀನ್ (25) ಜ್ವರದಿಂದ ಸಾವನ್ನಪ್ಪಿದ್ದು, ಇಲಿಜ್ವರದ ಶಂಕೆ ವ್ಯಕ್ತವಾಗಿದೆ. ಆದರೆ ಇಲಿಜ್ವರದ ಕುರಿತು ಖಾತ್ರಿಯಾಗಿಲ್ಲವೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕರಿಕೆಯ ಬಾಲನ್ ಹಾಗೂ ಲತಾ ದಂಪತಿಯ ಪುತ್ರ ಲಿಬೀನ್ ಪಕ್ಕದ ರಾಜ್ಯ ಕೇರಳಕ್ಕೆ ಕೆಲಸಕ್ಕೆಂದು ಪ್ರತಿದಿನ ಹೋಗಿ ಬರುತ್ತಿದ್ದರಂತೆ. ಇತ್ತೀಚೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೇರಳದ ಪರಿಯಾರಮ್ ಮೆಡಿಕಲ್ ಕಾಲೇಜ್ ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು ಎಂದು ತಿಳಿದು ಬಂದಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜು.3 ರಂದು ಲಿಬೀನ್ ಮೃತಪಟ್ಟಿದ್ದರು.
ಇಲಿಜ್ವರ ಸಾವಿಗೆ ಕಾರಣ ಎನ್ನುವ ಸುದ್ದಿ ಹಬ್ಬಿದ ಹಿನ್ನೆಲೆ ಆರೋಗ್ಯಾಧಿಕಾರಿಗಳು ಕರಿಕೆಯ ಲಿಬೀನ್ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ ಮನೆಯವರಿಗೆ ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ಯಾವುದೇ ಜ್ವರದ ಲಕ್ಷಣ ಕಂಡು ಬಂದಿಲ್ಲ ಎಂದು ಡಾ.ಕೆ.ಎಂ.ಸತೀಶ್ ಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.
ಕರಿಕೆ ಆರೋಗ್ಯ ಕೇಂದ್ರದಲ್ಲೂ ನಿಗಾ ವಹಿಸಲಾಗಿದೆ, ಈ ರೀತಿಯ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
Breaking News
- *ಕೊಡಗು ಪ್ರೆಸ್ ಕ್ಲಬ್ ನ ನೂತನ ಆಡಳಿತ ಮಂಡಳಿಯ ಪದಗ್ರಹಣ : ಅಧ್ಯಕ್ಷರಾಗಿ ಬೊಳ್ಳಜಿರ ಅಯ್ಯಪ್ಪ ಅಧಿಕಾರ ಸ್ವೀಕಾರ*
- *ವಿಜ್ರಂಭಣೆಯ ದಸರಾ ಆಚರಣೆಗೆ ಸಿದ್ಧತೆ : ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಮಾನ ಆದ್ಯತೆ : ಶಾಸಕ ಡಾ.ಮಂತರ್ ಗೌಡ*
- *ಶೋಭಾಯಾತ್ರೆಯಲ್ಲಿ ವಿಜ್ರಂಭಿಸಿದ ಶಾಂತಿನಿಕೇತನದ ಶ್ರೀಮಹಾಗಣಪ*
- *ಶಾಸಕ ಡಾ.ಮಂತರ್ ಗೌಡ ಮಡಿಕೇರಿ ನಗರ ಸಂಚಾರ : ದಸರಾದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ*
- *ಉತ್ತಮ ಕಾರ್ಯನಿರ್ವಹಣೆಗಾಗಿ ಮದೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಶಸ್ತಿ*
- *ಆರ್.ಅಶೋಕ್ ವಿರುದ್ಧ ಕೊಡಗು ಐಎನ್ಟಿಯುಸಿ ಅಸಮಾಧಾನ*
- *ಡಿಸಿಸಿ ಬ್ಯಾಂಕ್ ನ 99 ನೇ ವಾರ್ಷಿಕ ಮಹಾಸಭೆ : ಕೃಷಿಕರಿಗೆ 5 ಲಕ್ಷ ರೂ. ವರೆಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ : ರೂ.7.91 ಕೋಟಿ ಲಾಭ*
- *ಶ್ರೀಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ*
- *ಗೆಜ್ಜೆ ಹಣಕೋಡು : ಪೋಷಣ್ ಮಾಸಾಚರಣೆ ಹಾಗೂ ಮಾತೃವಂದನಾ ವಿಶೇಷ ಅಭಿಯಾನ*
- *ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ*