ಮಡಿಕೇರಿ ಜು.5 : ಹಾಕತ್ತೂರು ಗ್ರಾಮದ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕೂಲಿ ಕಾರ್ಮಿಕ ನಂಜುಂಡ(40) ಜೂ.27 ರಂದು ಮನೆಯಿಂದ ಹೊರ ಹೊದವರು ವಾಪಸು ಬಾರದೇ ಕಾಣೆಯಾಗಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂಜುಂಡ ಕನ್ನಡ, ತಮಿಳು, ಹಿಂದಿ ಭಾಷೆ ಮಾತನಾಡುವವರಾಗಿದ್ದು, 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ತೆಳ್ಳಗಿನ ಶರೀರ ಹೊಂದಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ 08272-228777 ಅಥವಾ ಪೊಲೀಸ್ ಅಧೀಕ್ಷಕರು 08272-229000 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.







