ಮಡಿಕೇರಿ,ಅ.12 NEWS DESK ; ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವನ್ನು ಜನೋತ್ಸವವನ್ನಾಗಿ ಆಚರಿಸಲಾಗುತ್ತಿದ್ದು, ಮಹಿಳಾ ದಸರಾ ಕೂಡ ಆಯೋಜನೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಅ.19ರಂದು ನಗರದ ಗಾಂಧಿ ಮೈದಾನದಲ್ಲಿ ಮಹಿಳಾ ದಸರಾ ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಯಿ0ದಲೇ ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆ, ಮನರಂಜನಾ ಆಟೋಟಗಳನ್ನು ಏರ್ಪಡಿಸಲಾಗಿದೆ. ಇದರೊಂದಿಗೆ ಮೆಹಂದಿ ಹಾಕುವದು, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ ಮಾಡುವದು, ಕೇಶ ವಿನ್ಯಾಸ, ಜಾನಪದ ನೃತ್ಯ( ಗುಂಪು-6ರಿAದ 8 ಮಂದಿ), ಫ್ಯಾಶನ್ ಶೋ- ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಅಮ್ಮನೊಂದಿಗೆ ಮಗಳು, ಸೀರೆಗೆ ನಿಖರ ಬೆಲೆ ಹೇಳುವದು ಸೇರಿದಂತೆ ವಿವಿಧ ಚಟುವಟಿಕೆಗಳು ಜರುಗಲಿವೆ. ಇದರೊಂದಿಗೆ ಮಹಿಳೆಯರು ಉತ್ಪಾದಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿಗೂ ಅವಕಾಶವಿದೆ. ಮಳಿಗೆಗಾಗಿ ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಸವಿತಾ(9483785810), ಸಬಿತಾ(8660180251), ನೇತ್ರ(8431210080) ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸಾಂಸ್ಕೃತಿಕ ಸಮಿತಿ ಪ್ರಕಟಣೆ ತಿಳಿಸಿದೆ.

















