ಮಡಿಕೇರಿ ಜು.7 – ಮಡಿಕೇರಿ ನ್ಯಾಯಾಲಯದ ವಕೀಲ ಕೃಷ್ಣಮೂತಿ೯ ಅವರಿಗೆ ಅನಾಮಧೇಯರಿಂದ ಬೆದರಿಕೆ ಪತ್ರ ಬಂದಿರುವ ಪ್ರಕರಣವನ್ನು ಖಂಡಿಸಿರುವ ಮಡಿಕೇರಿ ವಕೀಲರ ಸಂಘವು ಕೂಡಲೇ ದುಷ್ಕಮಿ೯ಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ವಕೀಲ ಕೖಷ್ಣಮೂತಿ೯ ಅವರಿಗೆ ಅನಾಮಧೇಯರಿಂದ ಬೆದರಿಕೆ ಪತ್ರವೊಂದು ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣಮೂತಿ೯ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಬೆದರಿಕೆ ಪತ್ರ ಬಂದಿರುವ ಪ್ರಕರಣದ ಬಗ್ಗೆ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಅವರು ಆಡಳಿತ ಮಂಡಳಿ ಸಭೆಯಲ್ಲಿ ಚಚಿ೯ಸಿದ್ದು ಪ್ರಕರಣವನ್ನು ಖಂಡಿಸಿದ್ದಾರೆ. ಅಂತೆಯೇ ಕೂಡಲೇ ಪೊಲೀಸರು ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಬೆದರಿಕೆ ಪತ್ರ ಬರೆದಿರುವ ದುಷ್ಕಮಿ೯ಗಳನ್ನು ಬಂಧಿಸಬೇಕು ಎಂದೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಈ ಹಿಂದೆಯೂ ಕೃಷ್ಣಮೂತಿ೯ ಅವರ ಕಾರ್ ಮೇಲೆ ಚೆಟ್ಟಳ್ಳಿ ಬಳಿ ಗುಂಡಿನ ಧಾಳಿ ನಡೆದಿತ್ತು. ಆ ಪ್ರಕರಣದ ಆರೋಪಿಗಳನ್ನೂ ಕೂಡ ಪೊಲೀಸರು ಇನ್ನೂ ಪತ್ತೆ ಹಚ್ಚಿಲ್ಲ. ಹೀಗಾಗಿ ನ್ಯಾಯವಾದಿ ಕೃಷ್ಣಮೂತಿ೯ ಅವರ ಮೇಲೆ ಪದೇ ಪದೇ ನಡೆಯುತ್ತಿರುವ ಬೆದರಿಕೆ, ಧಾಳಿಗಳನ್ನು ಹತ್ತಿಕ್ಕಲು ಎರಡೂ ಪ್ರಕರಣಗಳ ಆರೋಪಿಗಳನ್ನು ಬಂಧಿಸುವಂತೆ ನಿರಂಜನ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.