ಮಡಿಕೇರಿ ಜು.7 : ವೈಲ್ಡ್ ಲೈಫ್ ಸೊಸೈಟಿಯ ಹುಣುಸೂರು ಕಚೇರಿಯ ಹಿರಿಯ ಅಧಿಕಾರಿ ಕೆ.ಎಸ್.ಲೋಕೇಶ್(54) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಕೊಡಗು ಜಿಲ್ಲೆಯ ದುಬಾರೆ ಬಳಿಯ ರಂಗಸಮುದ್ರ ಗ್ರಾಮದ ನಿವಾಸಿಯಾಗಿರುವ ಇವರು ಶುಕ್ರವಾರ ಬೆಳಗ್ಗೆ ಮನೆಯಲ್ಲೇ ಕುಸಿದು ಬಿದ್ದರು. ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರು ಮೃತಪಟ್ಟಿರುವುದು ದೃಢಪಟ್ಟಿತು.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸಂಜೆ ರಂಗಸಮುದ್ರದಲ್ಲಿ ನಡೆಯಿತು.










