ಮಡಿಕೇರಿ ಜು.9 : ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು. ಸಂಘ 42.61 ಲಕ್ಷ ರೂ. ಲಾಭಗಳಿಸಿದ್ದು, ಶೇ.10 ಡಿವಿಡೆಂಟ್ ಘೋಷಣೆ ಮಾಡಲಾಯಿತು. ಉಪಾಧ್ಯಕ್ಷ ಅಶೋಕ ಪಿ.ಎಂ, ನಿರ್ದೇಶಕರುಗಳಾದ ಮೋಣಪ್ಪ ಎನ್ ಬಿ, ಪ್ರಸನ್ನ ನೆಕ್ಕಿಲ, ದೀನರಾಜ ದೊಡ್ಡಡ್ಕ, ಧನಂಜಯ ಕೋಡಿ, ಜಯರಾಮ ಪಿ ಟಿ, ಶೇಷಪ್ಪ ನಾಯ್ಕ ನಿಡ್ಯಮಲೆ, ರೇಣುಕಾ ಕುಂದಲ್ಪಾಡಿ, ಉದಯಕುಮಾರ ಪಿ ಎ, ದಾಸಪ್ಪ ಮಡಿವಾಳ, ಕಿರಣ ಬಂಗಾರಕೋಡಿ, ಹೊನ್ನಪ್ಪ ಅಮಚೂರು, ಸೀತಾರಾಮ ಕದಿಕಡ್ಕ, ಪುಷ್ಪಾವತಿ ವ್ಯಾಪಾರೆ, ಪ್ರದೀಪ ಕೆ ಎಂ ರವರು ಉಪಸ್ಥಿತರಿದ್ದರು. ಮಾ|ಯತೀಶ್ ಪ್ರಾರ್ಥಿಸಿ, ಮುಖ್ಯ ಕಾರ್ಯನಿರ್ವಣಾಧಿಕಾರಿ ಲೋಕೇಶ್ ಹೆಚ್.ಕೆ ಸ್ವಾಗತಿಸಿ, ನಿರ್ದೇಶಕ ಪ್ರಸನ್ನ ನೆಕ್ಕಿಲ ವಂದಿಸಿದರು.











