ಮಡಿಕೇರಿ ಜು.10 : ರೋಟರಿ ಮಡಿಕೇರಿ ವುಡ್ಸ್ ನ 2023-24 ನೇ ಸಾಲಿನ ನೂತನ ಅಧ್ಯಕ್ಷ ರೋಟರಿಯನ್ ಕೆ.ವಸಂತ ಕುಮಾರ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜು.12 ರಂದು ನಡೆಯಲಿದೆ.
ಅಂದು ಸಂಜೆ 6.30 ಗಂಟೆಗೆ ಮಡಿಕೇರಿ ರೋಟರಿ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಜಿಲ್ಲಾ ಯೋಜನಾ ಜಿಲ್ಲಾಧ್ಯಕ್ಷ ರೋಟರಿಯನ್ ಸತೀಶ್ ಬೋಳಾರ್, ರೋಟರಿ ವಲಯ 6ರ ಸಹಾಯಕ ಗವರ್ನರ್ ರೋಟರಿಯನ್ ಡಿ.ಎಂ.ತಿಲಕ್ ಪೊನ್ನಪ್ಪ ಹಾಗೂ ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.










