ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಸೇರಿದಂತೆ ದೇಶದ ವಿವಿಧೆಡೆ ಟೊಮೆಟೊ ಧಾರಣೆ ಪ್ರತೀ ಕೆ.ಜಿ ಗೆ ರೂ.200 ದಾಟಿದ್ದು, ಬೆಲೆಏರಿಕೆಗೆ ಕಡಿವಾಣ ಹಾಕಲು ಆಂಧ್ರಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಟೊಮೆಟೊಗಳನ್ನು ಖರೀದಿಸುವಂತೆ ಕೇಂದ್ರ ಸರಕಾರವು ಸಹಕಾರಿ ಮಾರುಕಟ್ಟೆ ಸಂಘಟನೆಗಳಾದ ನಾಫೆಡ್ ಹಾಗೂ ಎನ್‍ಸಿಸಿಎಫ್‍ಗೆ ಸೂಚನೆ ನೀಡಿದೆ.
ನಾಫೆಡ್ ಹಾಗೂ ಎನ್‍ಪಿಸಿಎಫ್ ಮೂಲಕ ಖರೀದಿಸಲಾದ ಟೊಮೆಟೊ ದಾಸ್ತಾನನ್ನು ದಿಲ್ಲಿ-ಎನ್‍ಸಿಆರ್ ಪ್ರಾರಂಭದಲ್ಲಿ ಜು.14 ರಿಂದ ದರಕಡಿತದೊಂದಿಗೆ ರಿಟೇಲ್ ಮಳೆಗೆಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.









