ಮಡಿಕೇರಿ ಜು.13 : ಇಂದಿನ ಜಾಗತೀಕರಣದ ಅಬ್ಬರದ ದಿನಗಳಲ್ಲಿ ಎಲ್ಲೆಲ್ಲೂ ಕಾಂಕ್ರೀಟ್ ಕಾಡುಗಳೇ ಕಂಡು ಬರುತ್ತಿರುವಾಗ ವನ ಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಸಿಗಳ ನೆಡುವಿಕೆ ಹೆಚ್ಚಾಗಬೇಕಾದ ಅತ್ಯಗತ್ಯವಾಗಿದೆ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸುಂದರರಾಜ್ ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಪೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ವೖತ್ತದಲ್ಲಿನ ಮಿಸ್ಟಿ ಹಿಲ್ಸ್ ನಿವ೯ಹಣೆಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ವನ ಮಹೋತ್ಸವವನ್ನು ಸಸಿ ನೆಡುವ ಮೂಲಕ ಸುಂದರ ರಾಜ್ ಉದ್ಘಾಟಿಸಿದರು.
ಈ ಸಂದಭ೯ ಮಾತನಾಡಿದ ಸುಂದರರಾಜ್, ನಗರ ಪ್ರದೇಶಗಳು ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲಿಯೂ ಇತ್ತೀಚಿನ ವಷ೯ಗಳಲ್ಲಿ ಕಾಂಕ್ರೀಟಿಕರಣವಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಹೀಗಾಗಿ ವನ ಸಂಪತ್ತನ್ನು ಸಂರಕ್ಷಿಸಬೇಕಾದ ಅಗತ್ಯತೆ ಮನಗಂಡು ಸಸ್ಯ ಸಂಕುಲ ವೖದ್ದಿಸುವ ದೖಷ್ಟಿಯಲ್ಲಿ ವನಮಹೋತ್ಸವದಂಥ ಕಾಯ೯ಕ್ರಮಗಳು ಹೆಚ್ಚಾಗಬೇಕಾಗಿದೆ ಎಂದರು. ರೋಟರಿಯಂಥ ಸಂಸ್ಥೆಗಳು ವನಮಹೋತ್ಸವ ಮೂಲಕ ವಾಷಿ೯ಕ ಸಾವಿರಾರು ಗಿಡಗಳನ್ನು ಬೆಳೆಸುವ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದೂ ಸುಂದರರಾಜ್ ಶ್ಲಾಘಿಸಿದರು.
ಯುವಪೀಳಿಗೆಗೂ ಸಸ್ಯಸಂಕುಲದ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವ ಮೂಲಕ ಮರಗಳನ್ನು ಕಡಿಯುವುದನ್ನು ತಡೆಗಟ್ಟಿ, ಪರಿಸರ ಸ್ನೇಹದ ಗುಣಗಳನ್ನು ಯುವಪೀಳಿಗೆಯ ಮನಸ್ಸುಗಲ್ಲಿ ಸೖಷ್ಟಿಸುವ ಅಗತ್ಯವಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸಲಹೆ ಮಾಡಿದರು.
ರೋಟರಿ ಜಿಲ್ಲೆ 3181 ನ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷ ಸತೀಶ್ ಬೊಳಾರ್ ಮಾತನಾಡಿ, ರೋಟರಿಯು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಈ ವಷ೯ವೂ ಅನೇಕ ಯೋಜನೆ ಹಮ್ಮಿಕೊಂಡಿದೆ. ಸಸ್ಯರಾಶಿಯನ್ನು ಹೆಚ್ಚಿಸುವ ಯೋಜನೆ ಜತೆಗೇ ಮಳೆಕೊಯ್ಲು ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.
ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ನಗರಸಭೆ ವತಿಯಿಂದ ಕಳೆದ ವಷ೯ 1 ಸಾವಿರ ಸಸಿಗಳನ್ನು ನಗರ ವ್ಯಾಪ್ತಿಯಲ್ಲಿ ನೆಡಲಾಗಿತ್ತು. ಈ ವಷ೯ವೂ ಸಸಿಗಳನ್ನು ನೆಡುವ ಮೂಲಕ ಮಡಿಕೇರಿ ನಗರವನ್ನು ಹಸಿರೀಕರಣ ಮಾಡುವ ಯೋಜನೆಯಿದೆ. ನಗರದ ಸ್ವಚ್ಚತೆಯನ್ನು ಕಾಪಾಡುವುದು ಪ್ರತೀಯೋವ೯ರ ಕತ೯ವ್ಯ ಹೇಗೆಯೇ ಅಂತೆಯೇ ಸಸ್ಯರಾಶಿಯ ರಕ್ಷಣೆ ಕೂಡ ಪ್ರತೀಯೋವ೯ರ ಹೊಣೆಯಾಗಿದೆ ಎಂದರು.
ರೋಟರಿ ಸಹಾಯಕ ಗವನ೯ರ್ ದೇವಣಿರ ತಿಲಕ್ ಮಾತನಾಡಿ, ಅಂಗನವಾಡಿಗಳಿಗೆ ಮೂಲಸೌಲಭ್ಯ ಕಲ್ಪಿಸುವುದು, ಮಳೆಕೊಯ್ಲು ಯೋಜನೆ, ಆರೋಗ್ಯ ಸಂರಕ್ಷಣೆಯಂಥ ರೋಟರಿಯ ಮಹತ್ವದ ಜಿಲ್ಲಾ ಯೋಜನೆಗಳ ಜತೆಯಲ್ಲಿಯೇ ಪರಿಸರ ರಕ್ಷಣೆಯ ಯೋಜನೆಗಳಿಗೆ ಕೂಡ ಈ ಸಾಲಿನಲ್ಲಿ ರೋಟರಿ ಅನೇಕ ಕಾಯ೯ಕ್ರಮಗಳನ್ನು ಆಯೋಜಿಸಲಿದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, ಈ ಸಾಲಿನ ಮೊದಲ ಯೋಜನೆಯಾಗಿ ವನಮಹೋತ್ಸವ ಆಯೋಜಿಸಲಾಗಿದೆ, ರೋಟರಿ ಮಿಸ್ಟಿ ಹಿಲ್ಸ್ ನಿವ೯ಹಣೆಯ ನಗರಸಭೆಯ ಉದ್ಯಾನವನದ ಪ್ರಯೋಜನವನ್ನು ನೂರಾರು ಮಕ್ಕಳು ಪಡೆದುಕೊಳ್ಳುತ್ತಿದ್ದು ಈ ವನದಲ್ಲಿ ಹಸಿರುರಾಶಿ ನಳನಳಿಸುತ್ತಿರಬೇಕೆಂಬ ಉದ್ದೇಶದಿಂದ ಅನೇಕ ಸಸಿಗಳನ್ನು ನೆಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ರತ್ನಾಕರ್ ರೈ ವಂದಿಸಿದ ಕಾಯ೯ಕ್ರಮವನ್ನು ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಎಚ್.ಟಿ. ನಿರೂಪಿಸಿದರು. ನಗರಸಭೆಯ ಸದಸ್ಯೆ ಶಾರದಾ ನಾಗರಾಜ್, ಮಾಜಿ ಸದಸ್ಯೆ ವೀಣಾಕ್ಷಿ, ಮಿಸ್ಟಿ ಹಿಲ್ಸ್ ಪ್ರಮುಖರಾದ ಅನಂತಶಯನ, ಪ್ರಸಾದ್ ಗೌಡ, ರವೀಂದ್ರರೈ, ಅಂಬೆಕಲ್ ಜೀವನ್, ಎ.ಕೆ.ವಿನೋದ್, ಪಿ.ಆರ್.ರಾಜೇಶ್, ಪೂವಯ್ಯ, ಪಿ.ವಿ. ಅಶೋಕ್, ಶಂಕರ್ ಪೂಜಾರಿ, ಮಡಿಕೇರಿ ರೋಟರಿ ವುಡ್ಸ್ ಅಧ್ಯಕ್ಷ ವಸಂತ್ ಕುಮಾರ್ ಸೇರಿದಂತೆ ಅನೇಕರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.