ಮಡಿಕೇರಿ ಜು.13 : ಕೊಡಗು ಜಿಲ್ಲಾ ಪೊಲೀಸ್ ಮತ್ತು ಪೊನ್ನಂಪೇಟೆ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಡ್ರಗ್ ದುರುಪಯೋಗ ಮತ್ತು ಸೈಬರ್ ಅಪರಾಧದ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭ ಕಾಲೇಜು ವಿದ್ಯಾರ್ಥಿಗಳೊಂದಿಗೆ ಡ್ರಗ್ ದುರುಪಯೋಗ ಮತ್ತು ಸೈಬರ್ ಅಪರಾಧ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸಂವಾದ ನಡೆಸಿದರು.
ಕಾರ್ಯಾಗಾರದಲ್ಲಿ ಸಿಐಟಿ ಕಾಲೇಜಿನ ಅಧ್ಯಕ್ಷ ಡಾ. ಕಾರ್ಯಪ್ಪ, ಉಪಾಧ್ಯಕ್ಷ ರಾಜೇಶ್ ಪೂವಯ್ಯ, ಪ್ರಾಂಶುಪಾಲ ಡಾ: ಬಸವರಾಜು, ಕಾಲೇಜಿನ ವಿದ್ಯಾರ್ಥಿವರ್ಗ, ಬೋಧಕ ವರ್ಗ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.