ಮಡಿಕೇರಿ ಜು.17 : ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್ ವತಿಯಿಂದ ಬಿಳಿಗೇರಿಯಲ್ಲಿ 3ನೇ ವರ್ಷದ ಹಿಂದೂ ಕೆಸರು ಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಲಿದೆ.
ತುಂತಜಿರ ಕುಟುಂಬಸ್ಥರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಕೃಷಿಕರಾದ ತುಂತಜಿರ ಚಂದ್ರಶೇಖರ್ ಉದ್ಘಾಟಿಸಿದರು.
ಅತಿಥಿಗಳಾಗಿ ಮಾಜಿ ಕ್ಯಾಪ್ಟನ್ ತುಂತಜಿರ ದಯಾನಂದ್, ಕೃಷಿಕ ತುಂತಜಿರ ಜನಾರ್ಧನ್, ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಅರವಿಂದ್, ತಾ.ಪಂ ಮಾಜಿ ಸದಸ್ಯೆ ತುಂತಜಿರ ಕುಮುದ ಮತ್ತಿತರರು ಪಾಲೊಂಡಿದ್ದರು.
ಕ್ರೀಡಾಕೂಟದಲ್ಲಿ ಕ್ರಿಕೆಟ್, ವಾಲಿಬಾಲ್, ಓಟದ ಸ್ಪರ್ಧೆ, ಹಗ್ಗಜಗ್ಗ ಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆದವು.









