ಕುಶಾಲನಗರ, ಜು.16 : ಕರ್ನಾಟಕ ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಕುಶಾಲನಗರ ಅರಣ್ಯ ವಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಹಾಗೂ ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ಕುಶಾಲನಗರ ಸಮೀಪದ ರಸಲ್ ಪುರ ಕಾವೇರಿ ನದಿದಂಡೆಯಂಚಿನಲ್ಲಿ ವನ ಮಹೋತ್ಸವ ಹಾಗೂ ಗೋ ಗ್ರೀನ್ ಅಭಿಯಾನದಡಿ ವಿವಿಧ 600 ಅರಣ್ಯ ಸಸಿಗಳನ್ನು ನೆಡುವ ಪರಿಸರ ಕಾರ್ಯಕ್ರಮದಲ್ಲಿ “ನದಿ ಪಾತ್ರದಲ್ಲಿ ಹಸಿರು ಪರಿಸರ ನಿರ್ಮಾಣ” ದ ಮಹತ್ವ ಕುರಿತು ಮಾತನಾಡಿದರು.
ನಮ್ಮ ಸುತ್ತಲಿನ ಪರಿಸರದಲ್ಲಿ ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರ ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದ್ದು, ಎಲ್ಲರೂ ಜತೆಗೂಡಿ ಹಸಿರು ಹೊದಿಕೆ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕು ಎಂದು ಪರಿಸರ ಸಂಘಟಕ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್
ಮನವಿ ಮಾಡಿದರು.
ನದಿಯ ದಂಡೆಗುಂಟ ಬೆಳೆಸುವ ಮರಗಿಡಗಳು ನದಿಯಲ್ಲಿ ನೀರಿನ ಹರಿವನ್ನು ಹೆಚ್ಚಿಸಿ, ವರ್ಷವಿಡೀ ನೀರಿರುವಂತೆ ಮಾಡಬಲ್ಲದು.
ಮರಗಿಡಗಳ ಬೇರುಗಳು ಮಣ್ಣಿನಲ್ಲಿ ಸೃಷ್ಟಿಸುವ ರಂಧ್ರಗಳು ಹಾಗೂ ಸೂಕ್ಷ್ಮ ಜಲಮಾರ್ಗಗಳ ಮೂಲಕ ಮಳೆಯ ನೀರು ನೆಲದೊಳಗೆ ಇಳಿದು, ಅಂತರ್ಜಲವಾಗಿ, ನಿಧಾನವಾಗಿ ಚಲಿಸಿ, ಕಡೆಗೊಮ್ಮೆ ನದಿತೊರೆಗಳಿಗೆ ಸೇರುತ್ತದೆಂಬುದು ತಿಳಿದ ವಿಷಯ. ಆದರೆ ದಂಡೆಯ ಮೇಲೆ ಮರಗಿಡಗಳ ಸಂಖ್ಯೆ, ದಟ್ಟಣೆ ಹೆಚ್ಚಾದರೆ ನದಿಗೆ ಸೇರುವ ನೀರಿನ ಪ್ರಮಾಣ ಹೆಚ್ಚುತ್ತದೆ.
ನದಿಯ ದಂಡೆಯ ಮೇಲೆ ಮರಗಳನ್ನು ಬೆಳೆಸುವುದರಿಂದ ನದಿಯಲ್ಲಿ ವರ್ಷವಿಡೀ ನೀರಿರುವಂತೆ ಮಾಡುವುದು ಸಾಧ್ಯ’. ದೇಶದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಆ್ಯಂಡ್ ಎಜುಕೇಶನ್’ ಸಂಸ್ಥೆ (ಐಸಿಎಫ್‍ಆರ್‌ಇ)ಯು ದೇಶದ ನದಿಗಳ ಎರಡು ದಂಡೆಯಲ್ಲೂ ಹೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ನದಿಗಳಲ್ಲಿ ವರ್ಷವಿಡೀ ತಕ್ಕಮಟ್ಟಿಗೆ ನೀರಿರುವಂತೆ ನೋಡಿಕೊಳ್ಳಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು 2015 ರಲ್ಲಿ ಅನುಷ್ಠಾನಗೊಳಿಸಲಾಗಿದೆ ದರು.
ಐಸಿಎಫ್‍ಆರ್‌ಇ ಸಿದ್ಧಪಡಿಸಿರುವ ‘ನದಿಗಳ ಪುನರುಜ್ಜೀವನ’ ನದಿಯ ಪುನರುಜ್ಜೀವನ ಕಾರ್ಯಕ್ರಮದಲ್ಲಿ, ನದಿಯ ದಡದಲ್ಲಿ ಪ್ರಾಯೋಗಿಕವಾಗಿ ನಡೆಸಿದ ಅರಣ್ಯೀಕರಣದ ಯಶಸ್ಸಿನ ಮೇಲೆ ರೂಪುಗೊಂಡಿದೆ’ ಎಂದರು.
2015ರಲ್ಲಿ ಡೆಹ್ರಾಡೂನ್‍ನ ಅರಣ್ಯ ಸಂಶೋಧನಾ ಸಂಸ್ಥೆ ಸಿದ್ಧಪಡಿಸಿದ ಈ ಯೋಜನೆ
ಗಂಗಾ ಮತ್ತು ಅದರ ಉಪನದಿಗಳ ದಂಡೆಯಲ್ಲಿ ಮರಗಿಡಗಳನ್ನು ಬೆಳೆಸುವ ಯೋಜನೆ ರೂಪುಗೊಂಡಿದೆ ಎಂದು ಪ್ರೇಮಕುಮಾರ್ ತಿಳಿಸಿದರು.
ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ ಮಾತನಾಡಿ, ಅರಣ್ಯ ಇಲಾಖೆಯ ವತಿಯಿಂದ
ನಾಗರಿಕರ ಸಹಭಾಗಿತ್ವದಲ್ಲಿ ಶಾಲಾ- ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 2500 ಗಿಡಗಳನ್ನು ನೆಟ್ಟು ಬೆಳೆಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಇಂತಹ ಹಸಿರು ನಿರ್ಮಾಣ ಅಭಿಯಾನದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು. ಕಾವೇರಿ ನದಿ ಪಾತ್ರದಲ್ಲಿ ಹಲಸು, ನೇರಳೆ, ಹೊಳೆ ಮಾವು, ಕಿರಾಲು ಬೋಗಿ, ಪೈಸೆ, ಹೊಳೆಮತ್ತಿ ಹಾಗೂ ಕೂಳಿ ಜಾತಿಯ ಗಿಡಗಳನ್ನು ನೆಡಲಾಯಿತು ಎಂದು ತಿಳಿಸಿದರು.
ಕಾವೇರಿ ಪರಿಸರ ಬಳಗದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ‘ಪ್ರತಿವರ್ಷ ನಡೆಯುವ ವನ ಮಹೋತ್ಸವಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಗುಡ್ಡೆಹೊಸೂರು ಗ್ರಾ.ಪಂ.ಸದಸ್ಯ ಲಕ್ಷ್ಮಣ್, ಡಿ ಆರ್ ಎಫ್ ಓ ಕೆ.ಎನ್.ದೇವಯ್ಯ, ಶ್ರವಣಕುಮಾರ್ ವಿಭೂತಿ, ಚೇತನ್, ಗಸ್ತು ವನ ಪಾಲಕ ವಿ.ಎಸ್. ಮಂಜೇಗೌಡ, ಸಿದ್ದರಾಮ ನಾಟೀಕರ್, ದಿನೇಶ್, ಎನ್‍ಎಸ್‍ಎಸ್ ಹಾಗೂ ಇಕೋ ಕ್ಲಬ್ ಘಟಕದ ವಿದ್ಯಾರ್ಥಿಗಳು, ಅರಣ್ಯ ವೀಕ್ಷಕರು, ಗ್ರಾಮಸ್ಥರು ಹಾಗೂ ಸಿಬ್ಬಂದಿ ಇದ್ದರು.