ಮಡಿಕೇರಿ ಜು.17 : ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ಬಿವಳವಾಡಿ ವಾರ್ಡ್ ಸಂಖ್ಯೆ- 2 ರ ಉಪಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭವ್ಯಶ್ರೀ ಎಂ.ಕೆ ಇತ್ತೀಚೆಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಉಪಾಧ್ಯಕ್ಷ ವಿ.ಜಿ.ಮೋಹನ್, ಪ್ರಧಾನ ಕಾರ್ಯದರ್ಶಿ ಯಶ್ ದೊಲ್ಪಾಡಿ, ವಲಯಾಧ್ಯಕ್ಷ ರಮೇಶ್ ರೈ, ಬೂತ್ ಅಧ್ಯಕ್ಷ ವಿಜು ಕಾರ್ಯಪ್ಪ, ಕಡಗದಾಳು ಗ್ರಾ.ಪಂ ಸದಸ್ಯೆ ಪುಷ್ಪಾವತಿ, ಪ್ರಮುಖರಾದ ಯೂಸುಫ್, ಖಾಸಿಂ, ಬಿ.ಡಿ.ನಾರಾಯಣ ರೈ, ಉಸ್ಮಾನ್ ಮತ್ತಿತರರು ಉಪಸ್ಥಿತರಿದ್ದರು.









