ಮಡಿಕೇರಿ ಜು.17 : ಕಡಗದಾಳು ಹಾಗೂ ಇಬ್ನಿವಳವಾಡಿ ವ್ಯಾಪ್ತಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿದರು.
ಗ್ರಾ.ಪಂ ನ ಇಬ್ನಿವಳವಾಡಿ ವಾರ್ಡ್ ಸಂಖ್ಯೆ- 2 ರ ಉಪಚುನಾವಣೆಗೆ ಕಣದಲ್ಲಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭವ್ಯಶ್ರೀ ಎಂ.ಕೆ, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಜಿಲ್ಲಾ ಉಪಾಧ್ಯಕ್ಷ ಕೊಕ್ಕಲೇರ ಸುಜು ತಿಮ್ಮಯ್ಯ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ವಲಯಾಧ್ಯಕ್ಷ ರಮೇಶ್ ರೈ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ರೌಫ್, ಉಪಾಧ್ಯಕ್ಷ ಬಿ.ಜಿ.ಮೋಹನ್, ಡಿಸಿಸಿ ಸದಸ್ಯ ಜಾನ್ಸನ್ ಪಿಂಟೋ, ಬ್ಲಾಕ್ ಮಾಜಿ ಉಪಾಧ್ಯಕ್ಷ ನಂದಿನೆರವಂಡ ಮಧು, ಕೆಪಿಸಿಸಿ ಸಾಮಾಜಿ ಜಾಲತಾಣದ ಮಾಜಿ ಉಸ್ತುವಾರಿ ಕೋಚನ ಹರಿಪ್ರಸಾದ್ ಮತ್ತಿತರರು ಹಾಜರಿದ್ದರು.









