ಮಡಿಕೇರಿ ಜು.19 : ಕಾಂಗ್ರೆಸ್, ಸಮಾಜವಾದಿ ಪಕ್ಷಗಳೂ ಸೇರಿದಂತೆ 26 ಪಕ್ಷಗಳ ಹೊಸ ಘಟ್ ಬಂಧನ್ ಬಿಜೆಪಿ ಮಿತ್ರ ಪಕ್ಷಗಳಿಗೆ ಭಯ ಉಂಟು ಮಾಡಿದ್ದು ಸೋಲಿನ ಹತಾಶೆಯಿಂದ ವಿದಾಯದ ಕೂಟ ನಡೆಸುತ್ತಿವೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡಿ ಮಹಾನ್ ಸೇನಾನಿಯ ಸೇನಾಜೀವನದ ಮಾಹಿತಿ ಪಡೆದ ಬಳಿಕ ಮಾಧ್ಯಮದವರೊಂದಿಗೆ ಅಖಿಲೇಷ್ ಯಾದವ್ ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ ಹವಾಮಾನದಂತೆ ಮೈತ್ರಿ ಕೂಟದ ಸಭೆಯ ವಾತಾವರಣವೂ ಬಹಳ ಉತ್ತಮವಾಗಿತ್ತು. ಲೋಕಸಭಾ ಚುನಾವಣೆಯನ್ನು ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ಎದುರಿಸುತ್ತೇವೆ ಎಂದು ಅವರು ಹೇಳಿದರು. .ಮೈತ್ರಿಕೂಟದ ಸಭೆಯ ದಿನದಂದೇ ಬಿಜೆಪಿಯು ತನ್ನ ಮಿತ್ರ ಪಕ್ಷಗಳ ಸಭೆ ಕರೆದಿದ್ದು ಅವರಿಗೆ ಮೈತ್ರಿ ಕೂಟದ ಬಗ್ಗೆ ಬಿಜೆಪಿ ಮುಖಂಡರಿಗೆ ಪ್ರಾರಂಭವಾಗಿರುವ ಭಯಕ್ಕೆ ನಿದಶ೯ನವಾಗಿದೆ. ಬಿಜೆಪಿ ನೇತೖತ್ವದ ಪಕ್ಷಗಳ ಸಭೆ ವಿದಾಯ ಕೂಟದ ಸಭೆಯಾಗಲಿದೆ. ಇಲ್ಲಿಯವರೆಗೆ ಮೋಜುಮಸ್ತಿ ಅನುಭವಿಸಿದ್ದಾಯಿತು. ಇನ್ನು ಅಧಿಕಾರದಿಂದ ವಿದಾಯ ಹೇಳುವ ಕಾಲ ಬರುತ್ತಿದೆ. ಹೊಸ ಘಟ್ ಬಂಧನ್ ಭಾರತವನ್ನು ಹೊಸದಿಶೆಯತ್ತ ಸಾಗಿಸಲಿದೆ ಎಂದು ಅಖಿಲೇಶ್ ಯಾದವ್ ಆಶಾಭಾವನೆ ವ್ಯಕ್ತಪಡಿಸಿದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಬಡತನ, ಹಾಗೇ ಇದೆ. ದಿನಬಳಕೆಯ ವಸ್ತುಗಳ ದರ ಹೆಚ್ಚುತ್ತಲೇ ಇದೆ. ನೋಟು ಅಮಾನ್ಯಕರಣದ ನಂತರವೂ ದೇಶದಲ್ಲಿ ಭ್ರಷ್ಟಾಚಾರ ಕೊನೆಯಾಗಲಿಲ್ಲ ಎಂದರೆ ನೋಟು ಅಮಾನ್ಯಕರಣ ನಿಧಾ೯ರವೇ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದು ಎಂದು ಹೇಳಬೇಕಾಗುತ್ತದೆ. ನೋಟು ಅಮಾನ್ಯಕರಣವನ್ನು ಸಮಥಿ೯ಸುವ ಒಂದೇ ಒಂಂದು ಕಾರಣವನ್ನೂ ಈವರೆಗೂ ಬಿಜೆಪಿಯಿಂದ ನೀಡಲಾಗಲಿಲ್ಲ. ಕನಾ೯ಟಕದಲ್ಲಿ ಶೇ.40 ರಷ್ಟು ಕಮಿಷನ್ ಆರೋಪ ಎದುರಿಸುತ್ತಿದ್ದ ಬಿಜೆಪಿ ಅಧಿಕಾರ ಕಳೆದುಕೊಂಡಂತೆಯೇ ಕೇಂದ್ರದಲ್ಲಿ ಭ್ರಷ್ಟಾಚಾರಿಗಳಿಗೆ ಬೆಂಬಲ ನೀಡುತ್ತಾ ಬಂದಿರುವ ಬಿಜೆಪಿ ಸಕಾ೯ರ ಕೂಡ ಅಧಿಕಾರ ಕಳೆದುಕೊಳ್ಳಲಿದೆ ಎಂದು ಅಖಿಲೇಶ್ ಭವಿಷ್ಯ ನುಡಿದರು.
ಇಂಡಿಯಾ (ಐಎನ್ ಡಿಐಎ) ಎಂಬ ಹೊಸ ಹೆಸರಿನಲ್ಲಿ ಬಹಳಷ್ಟು ಅಥ೯ವಿದೆ. ಅಭಿವೃದ್ಧಿ, ಸಹಮತ, ಒಗ್ಗಟ್ಟಿನ ಪ್ರತೀಕವಾದಂತಿದೆ ಈ ಹೊಸ ಹೆಸರು ಎಂದು ವಿಶ್ಲೇಷಿಸಿದ ಅಖಿಲೇಷ್, ಇಂಡಿಯಾ ಎಂಬ ಹೆಸರಿನಿಂದ ಸಹಜವಾಗಿಯೇ ಬಿಜೆಪಿ ಆತಂಕಕ್ಕೊಳಗಾಗಿದೆ. ಇಂಡಿಯಾ ಹೆಸರು ತನ್ನದು ಎಂದು ಈವರೆಗೂ ನಮ್ಮನ್ನು ಹೆದರಿಸುತ್ತಿದ್ದ ಬಿಜೆಪಿ ಇದೀಗ ಮೈತ್ಪಿ ಪಕ್ಷಗಳು ಯಾವಾಗ ಇಂಡಿಯಾ ಎಂದು ಹೆಸರಿಟ್ಟಿತೋ ಆಗಲೇ ಗಲಿಬಿಲಿಗೊಳಗಾಗಿದೆ. ಮುಂದಿನ ದಿನಗಳಲ್ಲಿ ಇಂಡಿಯಾವನ್ನು ಪ್ರಬಲಗೊಳಿಸುತ್ತಾ ಭಾರತೀಯರ ಆಶೋತ್ತರಕ್ಕೆ ತಕ್ಕಂತೆ ದೇಶವನ್ನು ಬಿಜೆಪಿ ಹಿಡಿತದಿಂದ ದೂರಮಾಡಲಿದ್ದೇವೆ ಎಂದೂ ಹೇಳಿದರು.
ಭಾರತೀಯರು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ವಿದಾಯ ಹೇಳುವ ದಿನವನ್ನು ಎದುರು ನೋಡುತ್ತಿದ್ದಾರೆ. ಬಿಜೆಪಿಯ ಸೋಲು ಖಚಿತವಾಗಿದೆ. ಮೈತ್ರಿ ಪಕ್ಷಗಳ ಒಗ್ಗಟ್ಟು ಇದಕ್ಕೆ ಕಾರಣವಾಗಲಿದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದರು.