ಮಡಿಕೇರಿ ಜು.19 : ರಾತ್ರಿ ಸುರಿದ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಗೋಡೆಗಳಿಗೆ ಹಾನಿಯಾಗಿರುವ ಘಟನೆ ಸೋಮವಾರಪೇಟೆ ಮಾದೇಶ್ವರ ಬ್ಲಾಕ್ ನಡೆದಿದೆ.
ಮಾದೇಶ್ವರ ಬ್ಲಾಕ್ ನ ನಿವಾಸಿ ತಿಮ್ಮಯ್ಯ ಎಂಬುವವರ ಮನೆಯ ಮೇಲ್ಚಾವಣಿ ಕುಸಿದು ಅಡುಗೆ ಮನೆ ಹಾಗೂ ಕೊಣೆಯ ಗೋಡೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ.








