ಮಡಿಕೇರಿ ಜು.19 : ಕೇಂದ್ರದ ಮಾಜಿ ಸಚಿವ ಹಾಗೂ ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ರಾಜ್ಯಸಭಾ ನಿಧಿಯಿಂದ ಕೊಡಗು ಜಿಲ್ಲೆಗೆ ನೀಡಿದ ಅನುದಾನದಲ್ಲಿ ನೂರುಕ್ಕನಾಡ್ ಹಿಲ್ಸ್-ಕತ್ತಲೆಕಾಡ್ ರಸ್ತೆ ಅಭಿವೃದ್ಧಿಯಾಗಿದೆ.
ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯನ್ನು ಡಾ.ಸುಬ್ರಮಣಿಯನ್ ಸ್ವಾಮಿ ಅವರ ಆಪ್ತ ಹಾಗೂ ವಿಹೆಚ್‍ಎಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕೊಡವರು ಹಾಗೂ ಕೊಡಗಿನ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಅನುದಾನವನ್ನು ನೀಡಿದ್ದಾರೆ. ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ಪ್ರಯತ್ನದ ಫಲವಾಗಿ ಇಂದು ರಸ್ತೆ ನಿರ್ಮಾಣಗೊಂಡಿದೆ. ಗ್ರಾಮಸ್ಥರು ಕಾಮಗಾರಿಯ ಬಗ್ಗೆ ಹೆಚ್ಚು ಆಸಕ್ತಿ ತೋರಿ ತಮ್ಮನ್ನು ತಾವು ತೊಡಗಿಸಿಕೊಂಡ ಕಾರಣ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಿದೆ ಎಂದರು.
ಯಾವುದೇ ಯೋಜನೆಗಳು ಅನುಷ್ಠಾನಗೊಳ್ಳುವಾಗ ಆಯಾ ಗ್ರಾಮಸ್ಥರು ಕಾಮಗಾರಿಯ ಗುಣಮಟ್ಟದ ಬಗ್ಗೆ ನಿಗಾ ವಹಿಸಬೇಕಾಗುತ್ತದೆ. ಹೆದ್ದಾರಿಗಳು ಮಾತ್ರ ಉತ್ತಮವಾಗಿದ್ದರೆ ಸಾಲದು, ಗ್ರಾಮೀಣ ರಸ್ತೆಗಳು ಕೂಡ ಉನ್ನತ ಮಟ್ಟದಲ್ಲಿರಬೇಕು. ಇದೇ ಕಾರಣಕ್ಕೆ ಗ್ರಾಮೀಣ ಭಾಗದ ಅಭಿವೃದ್ಧಿಗೆ ಒತ್ತು ನೀಡಿ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕೊಡಗಿಗೂ ಅನುದಾನ ನೀಡಿದ್ದಾರೆ ಎಂದರು.
ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮಾತನಾಡಿ ಕೊಡಗು ಹಿಂದೆ “ಕೂರ್ಗ್’ ರಾಜ್ಯವಾಗಿದ್ದಾಗ ಅಭಿವೃದ್ಧಿ ಕಾರ್ಯಗಳು ಗುಣಮಟ್ಟದಿಂದ ಕೂಡಿರುತ್ತಿತ್ತು. ಕರ್ನಾಟಕದೊಂದಿಗೆ ವಿಲೀನವಾಗಿ ಜಿಲ್ಲೆಯಾಗಿ ಪರಿವರ್ತನೆಯಾದ ನಂತರ ಕಮಿಷನ್ ಆಧಾರದ ಕಳಪೆ ಕಾಮಗಾರಿಗಳು ನಡೆದಿವೆ. ಆದರೆ ನೂರುಕ್ಕನಾಡ್ ಹಿಲ್ಸ್-ಕತ್ತಲೆಕಾಡ್ ರಸ್ತೆ ಕಾಮಗಾರಿ ಯಾವುದೇ ಕಮಿಷನ್ ಗೆ ಅವಕಾಶವಿಲ್ಲದೆ ಉತ್ತಮ ಗುಣಮಟ್ಟದಿಂದ ನಿರ್ಮಾಣಗೊಂಡಿದೆ ಎಂದರು.
ಕೊಡಗಿನ ಜನರ ಮೇಲಿನ ಪ್ರೀತಿಯಿಂದ ಡಾ.ಸುಬ್ರಮಣಿಯನ್ ಸ್ವಾಮಿ ಅವರು ದೊಡ್ಡ ಮೊತ್ತದ ಅನುದಾನ ನೀಡಿದ್ದಾರೆ. ಇನ್ನು ಮುಂದೆಯೂ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ಯಾವುದೇ ಕಮಿಷನ್ ಕಾಮಗಾರಿ ಇಲ್ಲಿ ನಡೆದಿಲ್ಲ, ಗ್ರಾಮಸ್ಥರಿಗೆ ಉತ್ತಮ ರಸ್ತೆ ನಿರ್ಮಿಸಿಕೊಡುವುದು ನಮ್ಮ ಉದ್ದೇಶವಾಗಿತ್ತು. ಇದೀಗ ನಿರ್ಮಾಣಗೊಂಡಿರುವ ರಸ್ತೆ ಸುದೀರ್ಘ ಕಾಲ ಉಳಿಯಲಿದ್ದು, ಜನ ಸದುಪಯೋಗಪಡಿಸಿಕೊಳ್ಳಬೇಕು. ಗುಣಮಟ್ಟದ ರಸ್ತೆಯನ್ನು ಸಂರಕ್ಷಿಸಿಕೊಳ್ಳುವುದು ಗ್ರಾಮಸ್ಥರಾದ ನಿಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ನನ್ನ ಕೋರಿಕೆಯ ಮೇರೆಗೆ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ನಿಧಿಯಡಿ ಕೊಡಗಿನ ಕುಗ್ರಾಮಗಳ “ಬಲ್ಯಮನೆ” ರಸ್ತೆ ಮತ್ತು ಇತರ ರಸ್ತೆಗಳ ಅಭಿವೃದ್ಧಿಗೆ 2.46 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು. ಮೊದಲ ಹಂತದಲ್ಲಿ ನೂರುಕ್ಕನಾಡ್ ಹಿಲ್ಸ್-ಕತ್ತಲೆಕಾಡ್ ರಸ್ತೆ ನಿರ್ಮಾಣವಾಗಿದೆ ಎಂದು ನಾಚಪ್ಪ ಹೇಳಿದರು.
ವೀರರ ಸಂಕೇತವಾದ ಕೊಡವ ಸಾಂಪ್ರದಾಯಿಕ ಕೋವಿ ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿ ರಸ್ತೆಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟಿ, ಎನ್.ಯು.ನಾಚಪ್ಪ, ರಸ್ತೆ ನಿರ್ಮಿಸಿದ ಗುತ್ತಿಗೆದಾರರಾದ ಜಯಚಂದ್ರೇಗೌಡ, ಮಾದಪ್ಪ ಹಾಗೂ ನಿಗಾ ವಹಿಸಿದ ಗ್ರಾಮದ ಪ್ರಮುಖ ಜನಾರ್ಧನ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸ್ಥಳೀಯ ಗ್ರಾಮಸ್ಥರು ಎನ್.ಯು.ನಾಚಪ್ಪ ಅವರ ಸಹಕಾರವನ್ನು ಶ್ಲಾಘಿಸಿದರು.
ಚೆಟ್ಟಳ್ಳಿ ಗ್ರಾ.ಪಂ ಅಧ್ಯಕ್ಷ ಮುತ್ತಪ್ಪ, ಸದಸ್ಯೆ ಪೊರಿಮಂಡ ತಂಗಮ್ಮ ಲೋಕೇಶ್, ಪ್ರಮುಖರಾದ ಪುಲ್ಲೇರ ಕಾಳಪ್ಪ, ಪುಲ್ಲೇರ ಸ್ವಾತಿ ಕಾಳಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತಾ ಗಿರೀಶ್, ನಂದೇಟಿರ ಕವಿತ ರವಿ, ರಮಣಿ ಶೇಷಪ್ಪ, ಪೂರ್ಣಿಮಾ ಶೆಟ್ಟಿ, ಕುಮಾರಿ ಆಸ್ನ ಶೆಟ್ಟಿ, ವಿಜೇಂದ್ರ ಶೆಟ್ಟಿ, ಅರೆಯಡ ಗಿರೀಶ್, ನಂದಿನೆರವಂಡ ನಂದ, ನಂದಿನೆರವಂಡ ದಿನೇಶ್, ಕುಮುದ, ಪೂವಪ್ಪ, ಜನಾರ್ಧನ, ಜನತ್, ಅರೆಯಡ ಗಿರೀಶ್, ನಂದಿನೆರವಂಡ ವಿಜು, ಪುಟ್ಟಿಚಂಡ ದೇವಯ್ಯ, ಮಣವಟ್ಟಿರ ಚಿಣ್ಣಪ್ಪ, ಪುದಿಯೊಕಡ ಕಾಶಿ, ನಂದೇಟಿರ ರವಿ, ಪೊರಿಮಂಡ ದಿನಮಣಿ, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ಅಯ್ಯಣ್ಣ, ಚೋಳಪಂಡ ನಾಣಯ್ಯ, ರವಿ ಕುಟ್ಟಪ, ನಂದಿನೆರವಂಡ ನಾಣಯ್ಯ, ರವಿ ಕುಟ್ಟಪ, ಬಾಲಕೃಷ್ಣ, ರಮೇಶ್, ಕಡಗದಾಳು ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಆರ್.ವಿನೋದ್, ಬೈರೇಟಿರ ವಿಜು, ಕೇಕಡ ಪ್ರಸನ್ನ ಕುಮಾರ್, ಪಟ್ಟಡ ಪುನೀತ್, ಸುನಿಲ್, ಚಂದ್ರಶೇಖರ್, ಮೋರಿಸ್, ಮೋಣ್ಣಪ್ಪ, ಹೊನ್ನಪ್ಪ, ಸುಭಾಷ್, ನವೀನ್, ನಯನ, ರಾಜಪ್ಪ, ರಾಮ, ರಾಮಣ್ಣ, ದರ್ಶನ್ ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*